ಕಲ್ಯೋಟ್ ಅವಳಿ ಕೊಲೆ ಪ್ರಕರಣದ ತೀರ್ಪು ನಾಳೆ: ಭಾರೀ ಬಂದೋಬಸ್ತ್ ಏರ್ಪಡಿಸಲು ನಿರ್ಧಾರ

ಕಾಸರಗೋಡು: ಕೇರಳ ರಾಜಕೀಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಪೆರಿಯ ಕಲ್ಯೋಟ್‌ನಲ್ಲಿ ಇಬ್ಬರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಕಡಿದು ಕೊಲೆಗೈದ ಪ್ರಕರಣದ ತೀರ್ಪು ಎರ್ನಾಕುಳಂನ ಸಿಬಿಐ ನ್ಯಾಯಾಲಯ ನಾಳೆ ಘೋಷಿಸಲಿದೆ. ತೀರ್ಪು ಘೋಷಣೆಯನ್ನು ಪರಿಗಣಿಸಿ  ಜಿಲ್ಲೆ ಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ಮೇಲ್ನೋಟದಲ್ಲಿ  ಬಿಗಿ ಭದ್ರತೆ ಏರ್ಪಡಿಸಲಾಗುವುದು.  ಇಂದು ನಡೆಯಲಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಉಂಟಾಗಲಿದೆ. ಪುಲ್ಲೂರು ಪೆರಿಯ ಪಂಚಾಯತ್ ಕೇಂದ್ರೀಕರಿಸಿ ಭದ್ರತಾ ವ್ಯವಸ್ಥೆ ಏರ್ಪಡಿಸುವ ಬಗ್ಗೆ ಸೂಚನೆಯಿದೆ. ಪೆರಿಯಾ ಕಲ್ಯೋಟ್, ಏಚಿಲಡ್ಕ ಮೊದಲಾದ ಪ್ರದೇಶಗಳು ಪೊಲೀಸರ ನಿಗಾದಲ್ಲಿರುವುದು. ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಏರ್ಪಡಿಸಲಿರುವ ಆಲೋಚನೆಯಲ್ಲಿ ದ್ದು ಈ ಬಗ್ಗೆ ಇಂದು ನಿರ್ಧಾರವಾಗಲಿದೆ.2019 ಫೆಬ್ರವರಿ 17ರಂದು ರಾತ್ರಿ ಕಲ್ಯೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್  ಹಾಗೂ ಕೃಪೇಶ್ ಎಂಬಿವರು ಕೊಲೆಗೀಡಾಗಿದ್ದರು. ತನ್ನಿತ್ತೋಟ್ ಎಂಬಲ್ಲಿ ಇವರು ಸಂಚರಿಸುತ್ತಿದ್ದ ಬೈಕ್ ತಡೆದು ನಿಲ್ಲಿಸಿದ ಸಿಪಿಎಂ ಕಾರ್ಯಕರ್ತರ ತಂಡ ವೊಂದು ಕಡಿದು ಕೊಲೆಗೈದಿರು ವುದಾಗಿ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

ಆರಂಭದಲ್ಲಿ  ಲೋಕಲ್ ಪೊಲೀಸ್, ಅನಂತರ ಕ್ರೈಂ ಬ್ರಾಂಚ್ ಈ ಪ್ರಕರಣದ ತನಿಖೆ ನಡೆಸಿತ್ತು. ಬಳಿಕ ಹೈಕೋರ್ಟ್‌ನ ನಿರ್ದೇಶ ಪ್ರಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸ ಲಾಗಿತ್ತು. ಕ್ರೈಂ ಬ್ರಾಂಚ್ ತನಿಖೆಯಲ್ಲಿ 14 ಮಂದಿಯನ್ನು  ಆರೋಪಿಗಳಾಗಿ ಸೇರಿಸ ಲಾಗಿತ್ತು. ಸಿಪಿಎಂ ಪೆರಿಯಾ ಲೋಕಲ್ ಕಮಿಟಿ ಸದಸ್ಯನಾಗಿದ್ದ ಎ. ಪೀತಾಂಬರನ್ ಪ್ರಕರಣದ ಒಂದನೇ ಆರೋಪಿ. ಸಿಬಿಐ ತನಿಖೆಯಲ್ಲಿ ಸಿಪಿಎಂ ನೇತಾರರಾದ ಕೆ.ವಿ. ಕುಂಞಿರಾಮನ್ ಸಹಿತ 10 ಮಂದಿಯನ್ನು ಹೆಚ್ಚುವರಿ ಆರೋಪಿ ಗಳಾಗಿ ಸೇರಿಸಲಾಗಿದೆ. ಪೀತಾಂಬ ರನ್ ಸಹಿತ 11 ಮಂದಿ ಆರೋ ಪಿಗಳು ಅವಳಿ ಕೊಲೆ ಪ್ರಕರಣದಲ್ಲಿ ಸೆರೆಗೀ ಡಾದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದಾರೆ.

You cannot copy contents of this page