ಉಪ್ಪಳ ಬಸ್ ನಿಲ್ದಾಣ ಶೌಚಾಲಯದ ಮಲಿನ ನೀರು ಸೋರಿಕೆ: ಪರಿಸರ ದುರ್ವಾಸನೆಯಿಂದ ಸಾರ್ವಜನಿಕರಿಗೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಮಲಿನ ನೀರು ಸೋರಿಕೆಯಾಗಿ ನಿಲ್ದಾಣದಲ್ಲಿ ಹರಿಯುತ್ತಿರುವುದು ಸಾರ್ವಜನಿಕರನ್ನು ಸಮಸ್ಯೆಗೀ ಡಾಗಿಸಿದೆ. ದುರ್ವಾಸನೆಯಿಂದ ನಿಲ್ದಾಣಕ್ಕೆ ತಲುಪುವ ನೂರಾರು ಪ್ರಯಾಣಿಕರ ಸಹಿತ ಸ್ಥಳೀಯ ವ್ಯಾಪಾರಿಗಳು ಮೂಗಿಗೆ ಕೈಹಿಡಿದು ನಿಲ್ಲುವಂತ ಪರಿಸ್ಥಿತಿ ಉಂಟಾಗಿರುವುದಾಗಿ ದೂರಲಾಗಿದೆ. ಅವ್ಯವಸ್ಥೆಯಿಂದ ಕೂಡಿದ ಈ ಶೌಚಾಲಯದಲ್ಲಿ ಪದೇ ಪದೇ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ತಿಳಿದಿದ್ದರೂ ದುರಸ್ತಿಗೊಳಿಸಲು ಮುಂದಾಗುತ್ತಿಲ್ಲವೆAದು ಸಾರ್ವಜನಿಕರು ಆರೋಪಿಸಿದ್ದಾರೆ. ಮಲಿನ ನೀರು ಮತ್ತು ಶೌಚಾಲಯಕ್ಕೆ ಉಪಯೋಗಿಸುವ ನೀರಿನ ಪೈಪ್‌ನಲ್ಲಿ ಸರಿಯಾಗಿ ಹರಿದು ಹೋಗದ ಕಾರಣ ಕಟ್ಟಿನಿಂತು ಸೋರಿಕೆಗೆ ಕಾರಣವೆನ್ನಲಾಗಿದೆ. ನಿಲ್ದಾಣದಲ್ಲಿ ಹರಡಿದ ಮಲಿನ ನೀರನ್ನು ತುಳಿದು ಪ್ರಯಾಣಿಕರು ನಡೆದಾಡ ಬೇಕಾ ಗುತ್ತಿದೆ. ಸಂಬAಧಪಟ್ಟ ಅಧಿಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page