ಬೋವಿಕ್ಕಾನ ಪೇಟೆಯಲ್ಲೂ ಚಿರತೆ ಪ್ರತ್ಯಕ್ಷ

ಮುಳ್ಳೇರಿಯ: ಮುಳಿ ಯಾರು ಪಂಚಾ ಯತ್‌ನ ವಿವಿಧೆಡೆಗಳಲ್ಲಿ ಚಿರತೆಯ ಬೆದರಿಕೆ ಮುಂದು ವರಿದಿದೆ. ನಿನ್ನೆ ರಾತ್ರಿ ಮುಳಿಯಾರು ಪಂಚಾಯತ್‌ನ ಕೇಂದ್ರವಾದ ಬೋ ವಿಕ್ಕಾನ ಪೇಟೆಯಲ್ಲಿ ಚಿರತೆ ಕಂಡು ಬಂದಿ ರುವುದಾಗಿ ವರದಿಯಾಗಿದೆ. ರಾತ್ರಿ 10.30ರ ವೇಳೆ ಬೋವಿಕ್ಕಾನ ಪೇಟೆಯ ದಿ| ಬಿ.ಕೆ. ಮುಹಮ್ಮದ್ ಕುಂಞಿಯವರ ಮನೆ ಸಮೀಪದಲ್ಲಿ ಚಿರತೆ ಕಂಡು ಬಂದಿದೆ. ವಿಷಯ ತಿಳಿದು ತಲುಪಿದ ಆರ್‌ಆರ್‌ಟಿ ತಂಡ ಹಾಗೂ ನಾಗರಿಕರು ಸ್ಥಳದಲ್ಲಿ ಶೋಧ ನಡೆಸಿದ್ದಾರೆ. ಚಿರತೆ ಮತ್ತೆ ಪ್ರತ್ಯಕ್ಷಗೊಂಡ  ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾಗ್ರತಾ ನಿರ್ದೇಶ ಹೊರಡಿಸಿದೆ.ಇದೇ ವೇಳೆ ಚಿರತೆಯನ್ನು ಬೋನಿನೊಳಗೆ ಸಿಲುಕಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಇದರ ಬೆನ್ನಲ್ಲೇ ಬೋವಿಕ್ಕಾನದಲ್ಲಿ ಚಿರತೆ ಪತ್ತೆಯಾದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.

You cannot copy contents of this page