ಸರ್ವೀಸ್ ರಸ್ತೆಯಲ್ಲಿ ಮಗುಚಿಬಿದ್ದ ಪಿಕಪ್ ವಾಹನಕ್ಕೆ ಹಾನಿ
ಉಪ್ಪಳ: ಮಂಗಳೂರಿನಿಂದ ಬಾಳೆಕಾಯಿ ಹೇರಿಕೊಂಡು ಬರುತ್ತಿದ್ದ ಪಿಕಪ್ ಕೈಕಂಬ ಬಳಿ ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ೬.೩೦ರ ವೇಳೆ ಸಂಭವಿಸಿದ್ದು, ಆದರೆ ಚಾಲಕ ಅಪಾಯದಿಂದ ಪಾರಾಗಿ ದ್ದಾರೆ. ಕೈಕಂಬ ಸರ್ವೀಸ್ ರಸ್ತೆ ಬದಿಯಲ್ಲಿ ಪಿಕಪ್ ಮಗಚಿದೆ. ಅದರ ಬಿಡಿ ಭಾಗದಲ್ಲಿ ಉಂಟಾದ ತೊಂದರೆ ಮಗುಚಲು ಕಾರಣವೆನ್ನ ಲಾಗಿದೆ. ಬಳಿಕ ಹೆದ್ದಾರಿ ದುರಸ್ತಿಯ ಕ್ರೈನ್ ತಂದು ಬದಿಗೆ ಸರಿಸಲಾಗಿದೆ. ಈ ವೇಳೆ ಅಲ್ಪ ಹೊತ್ತು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಿಕಪ್ನ ಗಾಜು ಸಹಿತ ಬಿಡಿಭಾಗಗಳು ಹಾನಿಗೊಂಡಿದೆ.