ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಣ ಅಪಹರಣ: ಯುವತಿಯರ ಸಹಿತ ಮೂವರು ಸೆರೆ
ತೃಶೂರು: ಯುವಕನನ್ನು ವಸತಿಗೃಹದ ಕೊಠಡಿಯಲ್ಲಿ ಬೀಗ ಹಾಕಿ ಆಕ್ರಮಣ ನಡೆಸಿ ಹಣ ಹಾಗೂ ಸಾಮಗ್ರಿಗಳನ್ನು ಅಪಹರಿಸಿದ ಘಟನೆಯಲ್ಲಿ ಪ್ರಧಾನ ಆರೋಪಿಗಳಾದ ಯುವತಿಯರ ಸಹಿತ ಮೂವರನ್ನು ಸೆರೆ ಹಿಡಿಯಲಾಗಿದೆ. ವಲಪ್ಪಾಡ್ ಬೀಚ್ ಈಯಾನಿ ಹಿಮಾ (25), ಕಾರಾಯಿಮುಟ್ಟಂ ಸ್ವಾತಿ (28), ಚಾಮಕ್ಕಲ ಶಿಬಿನ್ ನೌಶಾದ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ.
ನಾಟಿಗ ಬೀಚ್ ನಿವಾಸಿಯಾದ ಯುವಕನನ್ನು ತೃಪ್ರಯಾರ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಬಳಿಕ ಅಲ್ಲಿನ ಕೊಠಡಿಯಲ್ಲಿ ಕೂಡಿ ಹಾಕಿ ಆಕ್ರಮಿಸಿ ಜೇಬಲ್ಲಿದ್ದ 5000 ರೂ. ಹಾಗೂ ಒಂದೂವರೆ ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಮತ್ತು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಲಾಗಿತ್ತು. ಪರಾರಿಯಾದ ಆರೋಪಿಗಳನ್ನು ಬೆನ್ನಟ್ಟಿ ಕಳವುಗೈದ ಮಾಲುಗಳನ್ನು ಹಿಂಪಡೆಯಲು ತೆರಳಿದ ಯುವಕನಿಗೆ ಹಲ್ಲೆಗೈಯ್ಯಲಾಗಿತ್ತು. ಈ ಬಗ್ಗೆ ಯುವಕ ನೀಡಿದ ದೂರಿನಂತೆ ವಲಪ್ಪಾಡ್ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಗಳು ಸೆರೆಯಾಗಿದ್ದಾರೆ.