ಮುಳ್ಳೇರಿಯ: ಕಾರಡ್ಕ ಹಾಗೂ ಮುಳಿಯಾರು ಪಂಚಾ ಯತ್‌ಗಳಲ್ಲಿ ಚಿರತೆಯ ಉಪಟಳ ಇನ್ನೂ ಮುಂದುವರಿದಿದೆ. ಇದರಿಂದ ಯಾವುದೇ ಸಮ ಯದಲ್ಲಿ ಕಾಡಿನಿಂದ ಚಿರತೆ ನಾಡಿಗೆ ತಲುಪಬಹುದೆಂಬ ಭಯ ಜನರನ್ನು ಕಾಡುತ್ತಿದೆ. ನಿನ್ನೆ ರಾತ್ರಿ 7.30ರ ವೇಳೆ ಕಾರಡ್ಕ ಪಂಚಾಯ ತ್‌ನ ಕರ್ಮಂತೋಡಿ ಅಡ್ಕತ್ತೊಟ್ಟಿ ಯಲ್ಲಿ ಚಿರತೆ ಮನೆಯಂಗಳಕ್ಕೆ ತಲುಪಿ ಸಾಕು ನಾಯಿಯನ್ನು ಕಚ್ಚಿಕೊಂಡೊ ಯ್ದಿದೆ. ಆಟೋ ಚಾಲಕನಾದ ರವಿ ಎಂಬವರು ಸಾಕು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವುದನ್ನು ಕಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಅವರು ಕೂಡಲೇ ಸ್ಥಳೀಯರಿಗೆ ತಿಳಿಸಿದ್ದಾರೆ. ಬಳಿಕ ಜನರು ನಡೆಸಿದ ಶೋಧ ವೇಳೆ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿದೆ. ಈಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ರಾತ್ರಿ 10.30ರ ವೇಳೆ ನಾಗರಿಕರು ಒಗ್ಗೂಡಿ ಕರ್ಮಂತೋಡಿ ಯಲ್ಲಿರುವ ಅರಣ್ಯ ಕಚೇರಿಗೆ ದೊಂದಿ ಮೆರ ವಣಿಗೆ ನಡೆಸಿ ಪ್ರತಿಭಟನೆ ವ್ಯಕ್ತಪಡಿ ಸಿದರು. ಜನರ ಜೀವಕ್ಕೆ ಸಂರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಅವರು ಮೆರವಣಿಗೆ ನಡೆಸಿದರು. ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿದ್ದರು.
ಇದೇ ವೇಳೆ ಇರಿಯಣ್ಣಿಯಲ್ಲಿ ಇಂದು ಬೆಳಿಗ್ಗೆ ಕೂಡ ಚಿರತೆ ಕಂಡುಬಂ ದಿರುವುದಾಗಿ ವರದಿಯಾಗಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚಿರತೆಯನ್ನು ಕಂಡಿದ್ದಾರೆನ್ನಲಾಗಿದೆ. ಒಂದು ಚಿರತೆ ರಸ್ತೆಗೆ ಅಡ್ಡವಾಗಿ ಓಡಿರುವುದಾಗಿಯೂ, ಮತ್ತೊಂದರ ಘರ್ಜನೆ ಕೇಳಿಸಿರುವುದಾಗಿಯೂ ವಾಹನದಲ್ಲಿದ್ದ ವ್ಯಕ್ತಿ ನಾಗರಿಕರಲ್ಲಿ ತಿಳಿಸಿದ್ದಾರೆ. ಇದರಿಂದ ಇರಿಯಣ್ಣಿ ಹಾಗೂ ಪರಿಸರ ಪ್ರದೇಶದ ಜನರಲ್ಲಿ ಭಯ ಇನ್ನಷ್ಟು ಹೆಚ್ಚಿದೆ. ಮಕ್ಕಳು ಶಾಲೆಗೆ ತೆರಳಲು ಭಯ ಪಡುತ್ತಿದ್ದಾರೆ.
ರಾತ್ರಿ ಹೊತ್ತಿನಲ್ಲಿ ಮನೆ ಯಿಂದ ಹೊರಗಿಳಿಯಲು ಕೂಡಾ ನಾಗರಿಕರು ಭಯಪಡು ತ್ತಿದ್ದಾರೆ. ಇದುವರೆಗೆ ಮುಳಿಯಾರು ಹಾಗೂ ಕಾರಡ್ಕದಲ್ಲಿ ಚಿರತೆ ಮನುಷ್ಯರ ಮೇಲೆ ದಾಳಿ ನಡೆಸಿದ ಘಟನೆ ನಡೆದಿಲ್ಲವಾದರೂ ಚಿರತೆಯ ಭಯದಿಂದಾಗಿ ನೆಮ್ಮದಿ ಯಿಲ್ಲದಂತಾಗಿದೆಯೆಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.