ಮೂರೆಡೆ ಅಬಕಾರಿ ದಾಳಿ: ಭಾರೀ ಪ್ರಮಾಣದ ಮದ್ಯ, ಕಾರು ವಶ; ಓರ್ವ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ಮೂರುಕಡೆಗಳಿಗೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಕರ್ನಾಟಕ ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡಿದೆ. ಮಾತ್ರವಲ್ಲ ಓರ್ವನನ್ನು ಬಂಧಿಸಿದೆ.
ಮಂಜೇಶ್ವರ ತಪಾಸಣಾ ಕೇಂದ್ರ ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೬೦.೪೮ ಲೀಟರ್ ಕರ್ನಾಟಕ ಮದ್ಯ ಮತ್ತು ೪೮ ಲೀಟರ್ ಕರ್ನಾಟಕ ಬಿಯರ್ ವಶಪಡಿಸಿಕೊಂ ಡಿದೆ. ಮಾಲು ಸಾಗಿಸಲು ಬಳಸಲಾದ ಕಾರನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ. ಮಂಜೇಶ್ವರ ಎಕ್ಸೈಸ್ ಇನ್‌ಸ್ಪೆಕ್ಟರ್ ಸುನೀಶ್ ಮೋನ್ ಕೆ.ವಿ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಗೋಪಿ ಕೆ, ಪ್ರಿವೆಂಟೀವ್ ಆಫೀಸರ್‌ಗಳಾದ ರವೀಂದ್ರನ್ ಎಂ.ಕೆ, ರಮೇಶನ್ ಆರ್ (ಗ್ರೇಡ್), ಸಿಇಒಗಳಾದ ಮೋಹನ ಕುಮಾರ್, ಲಿಜು, ಸಿಜಿತ್ ವಿ.ವಿ ಮತ್ತು ಚಾಲಕ ರಾಧಾಕೃಷ್ಣನ್ ಎಂಬವರನ್ನೊಳ ಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದೇ ರೀತಿ ಬದಿಯಡ್ಕ ಎಕ್ಸೈಸ್ ರೇಂಜ್‌ನ ಎಕ್ಸೈಸ್ ಆಫೀಸರ್ ವೈ. ಸೈಯ್ಯಿದ್ ಮೊಹಮ್ಮದ್ ನೇತೃತ್ವದ ತಂಡ ಪೆರ್ಲದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೫.೦೪೦ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೊಯ್ದೀನ್ ಕುಂಞಿ (60) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಮಂಜುನಾಥ ಆಳ್ವ ಕೆ, ಸಿಇಒಗಳಾದ ಪ್ರಭಾಕರನ್ ಎಂ.ಎ, ಜನಾರ್ದನನ್ ಎನ್, ರಿಪ್ಸನ್ ಟಿ.ಜೆ ಮತ್ತು ಸತ್ಯನ್ ಇ.ಕೆ ಎಂಬವರು ಒಳಗೊಂಡಿದ್ದರು.
ಇನ್ನೊಂದೆಡೆ ಕಾಸರಗೋಡು ನಗರದ ಕರಂದಕ್ಕಾಡ್‌ನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 900 ಮಿಲ್ಲಿ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ಕಾಸರಗೋಡು ಎಕ್ಸೈಸ್‌ನ ಐಬಿ ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ ನೀಡಿದ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ಆಫೀಸ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ.ಯು ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಬೀರಂತಬೈಲು ನಿವಾಸಿ ಅನಿಲ್ ಕುಮಾರ್ ಕೆ (38) ಎಂಬಾತನ ವಿರುದ್ಧಪ್ರಕರಣ ದಾಖಲಿಸಲಾಗಿದೆ. ಆದರೆ ಆ ವೇಳೆ ಆತ ಪರಾರಿಯಾಗಿ ರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಟ್ರೈನಿ ವಿಷ್ಣುಕುಮಾರ್, ಸಿಇಒಗಳಾದ ಶ್ಯಾಂಜಿತ್ ಎಂ ಎಂಬಿವರು ಒಳಗೊಂಡಿದ್ದರು.