ಅಸ್ವಸ್ಥತೆ: ವೆಳ್ಳಾಪಳ್ಳಿಆಸ್ಪತ್ರೆಗೆ
ಕೊಲ್ಲಂ: ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್‌ರಿಗೆ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲಂನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಮಧ್ಯೆ ಅಸ್ವಸ್ಥತೆ ಕಂಡುಬಂದಿದೆ. ಕೂಡಲೇ ಹರಿಪ್ಪಾಡ್‌ನಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಿರುವಲ್ಲದ ಖಾಸಗಿ ವೈದ್ಯಕೀಯ ಕಾಲೇಜು ಆಸ್ರತ್ರೆಗೆ ದಾಖಲಿಸಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಉಸಿರಾಟ ಸಮಸ್ಯೆ ಉಂಟಾಗಿದ್ದು, ಈಗ ಚೇತರಿಸಿದ್ದಾರೆ. ಆಸ್ಪತ್ರೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಚಿವರಾದ ವೀಣಾ ಜೋರ್ಜ್, ಸಜಿ ಚೆರಿಯನ್, ಕಾಂಗ್ರೆಸ್‌ನ ರಮೇಶ್ ಚೆನ್ನಿತ್ತಲ ಸಹಿತ ಹಲವರು ನಟೇಶರನ್ನು ಸಂದರ್ಶಿಸಿದರು.