ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಉಪಜಿಲ್ಲಾ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ದೇಶೀಯ ಅಧ್ಯಾ ಪಕ ಪರಿಷತ್ ಕಾಸರಗೋಡು ಉಪ ಜಿಲ್ಲಾ ಸಮ್ಮೇಳನ ಕೂಡ್ಲುನ ಎನ್ಟಿಯು ಜಿಲ್ಲಾ ಕಾರ್ಯಾಲ ಯದಲ್ಲಿ ನಡೆಯಿತು. ಉಪಜಿಲ್ಲಾ ಸಮಿತಿ ಅಧ್ಯಕ್ಷ ಪ್ರದೀಪ್ ಕೆ.ವಿ ಧ್ವಜಾರೋಹಣ ನೆರವೇರಿಸಿದರು. ಎನ್ಟಿಯು ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷ ಪ್ರದೀಪ್ ಕೆ.ವಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಾಲಕಷ್ಣ ಪಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಸತೀಶನ್ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಭ್ರಮರಾಂಬಿಕ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯೆಯ ಸುರೇಖಾ ಕೆ ವಂದಿಸಿದರು. ವೀಣಾ ಟೀಚರ್ ಪ್ರಾರ್ಥನೆ ಹಾಡಿದರು.
ನಂತರ ನಡೆದ ಸಂಘಟನಾ ಸಭೆ ಯಲ್ಲಿ ಮಹಾಬಲ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಭ್ರಮರಾಂಬಿಕ ವಾರ್ಷಿಕ ವರದಿ, ವೇಣುಗೋಪಾಲ ಲೆಕ್ಕಪತ್ರ ಮಂಡಿಸಿ ದರು. ಬಾಲಕೃಷ್ಣ ಚರ್ಚೆ ಮುನ್ನಡೆಸಿ ದರು. ಅಮಿತಾ ಟೀಚರ್ ಸ್ವಾಗತಿಸಿ, ಭ್ರಮರಾಂಬಿಕ ವಂದಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಜಿಲ್ಲಾ ಅಧ್ಯಕ್ಷರಾಗಿ ಪ್ರದೀಪ್ ಕೆ.ವಿ. ಬೋವಿಕ್ಕಾನ, ಉಪಾಧ್ಯಕ್ಷರಾಗಿ ಜಯಚಂದ್ರನ್, ವಿದ್ಯಾ ಸಿ.ಎಚ್, ಅಮಿತಾ ಕಾವುಗೋಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಭ್ರಮರಾಂಬಿಕ ಕೂಡ್ಲು, ಜೊತೆ ಕಾರ್ಯದರ್ಶಿಗಳಾಗಿ ಮುರಳೀಧರ ಶರ್ಮ, ಅನೀಶ್ ಕುಮಾರ್, ಕೋಶಾ ಧಿಕಾರಿಯಾಗಿ ವೇಣುಗೋಪಾಲ ಕೂಡ್ಲು ಆಯ್ಕೆಗೊಂಡರು.