ಕುಂಡುಕೊಳಕೆಯಲ್ಲಿ ಗ್ರಾಂಡ್ ಬೀಚ್ ಉತ್ಸವಕ್ಕೆ ಚಾಲನೆ

ಮಂಜೇಶ್ವರ: ಎಎಚ್‌ಎಸ್ ತಂಡ ಆಯೋಜಿಸಿದ ಬೀಚ್ ಉತ್ಸವವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕುಂಡುಕೊಳಕೆ ಕಡಲ ಕಿನಾರೆಯಲ್ಲಿ ಗ್ರಾಂಡ್ ಬೀಚ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಮನರಂಜನೆಯ ಜೊತೆಗೆ ಸ್ಥಳೀಯ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ರಸಪ್ರಶ್ನೆ ಕಾರ್ಯಕ್ರಮ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ವಿಶೇಷ ಮನರಂಜನೆಯನ್ನು ಉತ್ಸವ ನೀಡಲಿದೆ ಎಂದು ಉದ್ಘಾಟಿಸಿದ ಶಾಸಕ ಎಕೆಎಂ ಅಶ್ರಫ್ ಅಭಿಪ್ರಾಯಪಟ್ಟರು.  ಈ ತಿಂಗಳ ೨೬ರ ವರೆಗೆ ಬೀಚ್ ಉತ್ಸವ ನಡೆಯಲಿದೆ.

RELATED NEWS

You cannot copy contents of this page