ಮಂಜೇಶ್ವರ, ಬದಿಯಡ್ಕ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರ ಸಹಿತ ಓರ್ವೆಯ ಪುತ್ರನೂ ನಾಪತ್ತೆ
ಕಾಸರಗೋಡು: ಮಂಜೇಶ್ವರ, ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. ಇದರಲ್ಲಿ ಓರ್ವೆ ಮಗು ಸಹಿತ ನಾಪತ್ತೆಯಾಗಿದ್ದಾಳೆ. ಈ ಎರಡೂ ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಂಜತ್ತೂರು ಬಿ.ಎಸ್. ನಗರ ಅಲಿಮಾ ಮಂಜಿಲ್ ನಿವಾಸಿ ಅಫ್ರೀನ (19) ಈ ತಿಂಗಳ ೬ರಂದು ರಾತ್ರಿ ೮ರಿಂದ ನಾಪತ್ತೆಯಾಗಿದ್ದಾಳೆ. ಮಂಜೇಶ್ವರ ಕುಂಡುಕೊಳಕೆಯಲ್ಲಿ ನಡೆಯುತ್ತಿರುವ ಬೀಚ್ ಫೆಸ್ಟಿವಲ್‌ಗೆಂದು ಮನೆಯಿಂದ ತೆರಳಿದ್ದಳು. ಬೀಚ್‌ಗೆ ತಲುಪಿದ ಬಳಿಕ ಯಾವುದೋ ಒಂದು ಬೈಕ್‌ನಲ್ಲಿ ಹತ್ತಿ ತೆರಳಿರುವುದಾಗಿಯೂ ಆ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ಈ ಬಗ್ಗೆ ಮಂಜೇಶ್ವರ ಪೊಲೀಸರು ದಾಖಲಿಸಿದ ಕೇಸಿನಲ್ಲಿ ವಿವರಿಸಲಾಗಿದೆ.
ಬದಿಯಡ್ಕ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಬೇಳ ದರ್ಬೆತ್ತಡ್ಕದಿಂದ ರಾಮಚಂದ್ರರ ಪತ್ನಿ ಮಾಲತಿ (30) ಹಾಗೂ ಪುತ್ರ ಮನೀಶ್ (5) ಎಂಬಿವರು ನಾಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಬದಿಯಡ್ಕದ ಆಸ್ಪತ್ರೆಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರ ಹೋಗಿದ್ದರು. ಆ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ಸಹೋದರ ಕಮಲಾಕ್ಷ ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.