ಹ್ಯಾಶಿಶ್ ಆಯಿಲ್ ಸಹಿತ ಓರ್ವ ಸೆರೆ
ಉಪ್ಪಳ: ಭಾರೀ ಮಾದಕ ವಸ್ತುವಾದ ಹ್ಯಾಶಿಶ್ ಆಯಿಲ್ ಕೈವಶವಿರಿಸಿಕೊಂಡಿದ್ದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ. ಕುಂಬಳೆ ಕೊಯಿಪ್ಪಾಡಿ ಕುಂಟಂಗೇರಡ್ಕದ ಮೊಹಮ್ಮದ್ ಅಪ್ಸಲ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ಕೈಯಿಂದ 48 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸೋಂಕಾಲು ಬಳಿಯ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ಮೊಹಮ್ಮದ್ ಅಪ್ಸಲ್ ಪತ್ತೆಯಾಗಿದ್ದನು. ಆತನನ್ನು ಪೊಲೀಸರು ತಪಾಸಣೆ ನಡೆಸಿದಾಗ ಹ್ಯಾಶಿಶ್ ಆಯಿಲ್ ಪತ್ತೆಯಾಗಿದೆ. ಬಂಧಿತ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.