ಕ್ಷೇತ್ರದಿಂದ ಕಳವುಗೈದು ಹಿಂತಿರುಗುತ್ತಿದ್ದ ಮಧ್ಯೆ ಮರೆತ ಬೈಕ್: ಠಾಣೆಗೆ ತಲುಪಿದ ವ್ಯಕ್ತಿಯನ್ನು ಸೆರೆಹಿಡಿದ ಪೊಲೀಸರು
ಮಲಪ್ಪುರಂ: ಬೈಕ್ ಕಳವುಗೈಯ್ಯಲಾಗಿದೆಯೆಂದು ದೂರು ಸಹಿತ ಪೊಲೀಸ್ ಠಾಣೆಗೆ ತಲುಪಿದ ಯುವಕ ಕ್ಷೇತ್ರಕಳವು ಪ್ರಕರಣದಲ್ಲಿ ಸೆರೆಯಾಗಿದ್ದಾನೆ. ಗುರುವಾಯೂರು ಖಂಡನಾಶ್ಶೇರಿ ನಿವಾಸಿ ಪೂತರ ಅರುಣ್‌ನನ್ನು ಎಡಪ್ಪಾಲ ಪೊಲೀಸರು ಬಂಧಿಸಿದ್ದಾರೆ. ಕ್ಷೇತ್ರದಿಂದ ಕಳವು ನಡೆಸಿ ಹಿಂತಿರುಗುತ್ತಿದ್ದ ಮಧ್ಯೆ ಬೈಕ್ ಮರೆತುಹೋಗಿದೆಯೆಂದು ಠಾಣೆಗೆ ತಲುಪಿದಾಗ ಆತ ಕಳ್ಳನೆಂದು ಗುರುತುಹಚ್ಚಿದ ಪೊಲೀಸರು ಸೆರೆಹಿಡಿದಿದ್ದಾರೆ. ಕಳೆದ ಐದರಂದು ಕಾಂದಲ್ಲೂರು ಕ್ಷೇತ್ರದಿಂದ ಕಳವು ನಡೆಸಲಾಗಿದೆ. ಅಲ್ಲಿಂದ 8 ಸಾವಿರ ರೂ. ಕಳವುಗೈದಿದ್ದು ಆ ವೇಳೆ ಬೈಕ್ ಮರೆತುಹೋಗಿತ್ತು. ಮರುದಿನ ಕ್ಷೇತ್ರ ಪರಿಸರಕ್ಕೆ ತಲುಪಿದಾಗ ಶಂಕಾಸ್ಪದ ರೀತಿಯಲ್ಲಿ ಕಂಡುಬಂದ ಬೈಕ್‌ನ್ನು ಪೊಲೀಸರು ಠಾಣೆಗೆ ನೀಡಿರುವುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಠಾಣೆಗೆ ತಲುಪಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ.