2 ಕಿಲೋ 90 ಗ್ರಾಂ ಗಾಂಜಾ ಸಹಿತ ಓರ್ವ ಸೆರೆ  

ಮಂಜೇಶ್ವರ: ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಕಿಲೋ 90ಗ್ರಾಂ ಗಾಂಜಾ ಹಾಗೂ ಬೈಕ್ ಸಹಿತ ಓರ್ವನನ್ನು ಸೆರೆಹಿಡಿದಿದ್ದಾರೆ. ಉಪ್ಪಳ ಬಳಿಯ ಅಂಬಾರು ಎಸ್.ಕೆ ಪ್ಲಾಟ್‌ನಲ್ಲಿ ವಾಸವಾಗಿರುವ ಮೊಹಮ್ಮದ್ ಆದಿಲ್ ಅಲಿ [27] ಸೆರೆಗೀಡಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಡಿ.ವೈ.ಎಸ್.ಪಿ.ವರ ನಿರ್ದೇಶದಂತೆ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐಲ ಮೈದಾನ ಪರಿಸರದಿಂದ ಶನಿವಾರ ರಾತ್ರಿ ಸೆರೆ ಹಿಡಿದಿದ್ದಾರೆ. ಬೈಕ್ e್ರ‍್ಪ}್ರ ನಿಂತಿದ್ದ ವೇಳೆ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಬೈಕ್, ಗಾಂಜಾವನ್ನು ವಶಕ್ಕೆ ತೆಗೆದು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಠಾಣೆಯ ಎಸ್.ಐಗಳಾದ ಉಮೇಶ್.ಕೆ.ಆರ್, ರತೀಶ್ ಗೋಪಿ, ಮನುಕೃಷ್ಣ ಎಂ.ಎನ್, ಎ.ಎಸ್.ಐ ಅತುಲ್‌ರಾಮ್, ಸಿವಿಲ್ ಪೋಲೀಸ್ ಆಫೀಸರುಗಳಾದ ಅನೀಶ್ ವಿಜಯನ್, ಶ್ರೀಜಿತ್, ಭಕ್ತ ಶೈವಲ್, ದೀಪಕ್ ಮೋಹನ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

You cannot copy contents of this page