ಸಿಪಿಎಂ ಕುಂಬಳೆ ಏರಿಯಾ ಸಮಿತಿ ಸ್ಪಷ್ಟೀಕರಣ ಸಭೆ
ಕುಂಬಳೆ: ಸಿಪಿಎಂ ಕುಂಬಳೆ ಏರಿಯಾ ಸಮಿತಿ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ರಾಜಕೀಯ ಸ್ಪಷ್ಟೀಕರಣ ಸಭೆ ನಡೆಸಲಾಯಿತು. ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ.ವಿ. ಕುಂಞಿರಾಮನ್ ಉದ್ಘಾ ಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಡಿ. ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿ ಯೇಟ್ ಸದಸ್ಯ ಕೆ.ಆರ್. ಜಯಾನಂದ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಪಿ. ರಘುದೇವನ್ ಮಾತನಾಡಿ ದರು. ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಸ್ವಾಗತಿಸಿದರು.