ಪತ್ನಿ ಸಿಟ್ಟುಗೊಂಡು ತೆರಳಿದುದರಿಂದ ಮನನೊಂದ ಯುವಕ ನೇಣು ಬಿಗಿದು ಸಾವು
ಕಾಸರಗೋಡು: ಪತ್ನಿ ಸಿಟ್ಟುಗೊಂಡು ತೆರಳಿದುದರಿಂದ ಮನನೊಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳ ಮಿಂಗೋತ್‌ನ ಪೊನ್ನಪ್ಪನ್ ಎಂಬವರ ಪುತ್ರ ಸಜುಲಾಲ್ (38) ಸಾವಿಗೀಡಾದ ವ್ಯಕ್ತಿ. ಕಳೆದ ದಿನ ರಾತ್ರಿ ಸಹೋದರ ಸಜುವಿನ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಜುಲಾಲ್ ಪತ್ತೆ ಯಾಗಿದ್ದನು. ಕೂಡಲೇ ಮನೆಯವರು ಹಾಗೂ ಸ್ಥಳೀಯರು ಸೇರಿ ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಅಂಬಲತ್ತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಜುಲಾಲ್‌ರ ಪತ್ನಿಯಾದ ಕೊಲ್ಲಂ ನಿವಾಸಿ ಯುವತಿ ತಿಂಗಳುಗಳ ಹಿಂದೆ ಸಿಟ್ಟುಗೊಂಡು ತೆರಳಿದ್ದಳೆನ್ನಲಾಗಿದೆ. ೯ ಹಾಗೂ ೪ರ ಹರೆಯದ ಇಬ್ಬರು ಮಕ್ಕಳನ್ನು ಪತಿಯ ಮನೆಯಲ್ಲಿ ಬಿಟ್ಟು ಯುವತಿ ತೆರಳಿದ್ದಾಳೆ. ಅನಂತರ ಆಕೆ ಮಕ್ಕಳನ್ನು ಕೂಡಾ ಕಾಣಲು ಬಂದಿಲ್ಲ. ಯುವತಿ ಬೇರೊಬ್ಬ ನೊಂದಿಗೆ ಮದುವೆಯಾಗಿರುವುದಾಗಿ ಹೇಳಲಾಗು ತ್ತಿದೆ. ಆದರೆ ಈ ಬಗ್ಗೆ ದೃಢೀಕರಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.