ತಾಯಿ ಸಾಕ್ಷಿ: 15ರ ಬಾಲಕಿಗೆ ಕರಿಮಣಿ ಕಟ್ಟಿದ ಯುವಕ : ಹೊಟೇಲ್ಗೆ ಕರೆದೊಯ್ದು ದೌರ್ಜನ್ಯ; ಕೇಸು ದಾಖಲು
ಪತ್ತನಂತಿಟ್ಟ: 15ರ ಹರೆ ಯದ ಬಾಲಕಿಯನ್ನು ವಿವಾಹಗೈದು ಮೂನಾರಿನ ಹೊಟೇಲ್ಗೆ ತಲುಪಿಸಿ ದೌರ್ಜನ್ಯಗೈದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇಲಂದೂರ್ ಇಡಪ್ಪರಿ ಯಾರಂ ನಿವಾಸಿ ಅಮಲ್ ಪ್ರಕಾಶ್ (25) ಹಾಗೂ ಬಾಲಕಿಯ ೩೫ ವರ್ಷ ಪ್ರಾಯದ ತಾಯಿ ಎಂಬವರನ್ನು ಬಂಧಿಸಲಾಗಿದೆ. ಫೋನ್ ಕರೆ ಮಾಡಿ ಹಾಗೂ ಸಂದೇಶಗಳನ್ನು ಕಳುಹಿಸಿ ಅಮಲ್ ಬಾಲಕಿಯ ಜೊತೆ ಸಂಪರ್ಕ ಸ್ಥಾಪಿಸಿದ್ದನು. ಕಳೆದ ಶನಿವಾರ ಬಾಲಕಿ ಹಾಗೂ ತಾಯಿ ಮನೆಯಿಂದ ನಾಪತ್ತೆಯಾಗಿದ್ದರು. ಇವರಿಬ್ಬರು ಚೂಟಿಪ್ಪಾರ ಎಂಬ ಸ್ಥಳಕ್ಕೆ ತಲುಪಿದ್ದು, ತಾಯಿಯನ್ನು ಸಾಕ್ಷಿಯನ್ನಾಗಿ ಮಾಡಿ ಅಮಲ್ ಬಾಲಕಿಯ ಕುತ್ತಿಗೆಗೆ ಕರಿಮಣಿ ಕಟ್ಟಿದ್ದನು. ಸಂಜೆ ವೇಳೆಗೆ ಈ ಮೂರು ಮಂದಿಯೂ ಮೂನಾರ್ ಪೇಟೆಗೆ ತಲುಪಿದ್ದು, ಅಲ್ಲಿ ಒಂದು ಹೊಟೇಲ್ನಲ್ಲಿ ಕೊಠಡಿ ಪಡೆದಿದ್ದರು. ತಾಯಿ ಸ್ನಾನಕ್ಕೆಂದು ಹೋದಾಗ ಅಮಲ್ ಬಾಲಕಿಯನ್ನು ದೌರ್ಜನ್ಯಗೈದಿರುವುದಾಗಿ ಕೇಸು ದಾಖಲಾಗಿದೆ. ಇದೇ ವೇಳೆ ಬಾಲಕಿ ನಾಪತ್ತೆಯಾಗಿರುವುದಾಗಿ ತಂದೆ ಮಲೆಯಾಳಪುಳ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿದ ಪೊಲೀಸರು ಸೈಬರ್ ಸೆಲ್ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಮೂರು ಮಂದಿಯನ್ನು ಹೊಟೇಲ್ ಕೊಠಡಿಯಿಂದ ಪತ್ತೆಹಚ್ಚಿದ್ದಾರೆ. ಬಳಿಕ ಇವರನ್ನು ಕಸ್ಟಡಿಗೆ ಪಡೆದು ಬಾಲಕಿಯನ್ನು ಕೋನ್ನಿಯ ನಿರ್ಬಯ ಮಂದಿರಕ್ಕೆ ಸೇರಿಸಲಾಗಿದೆ. ಅಮಲ್ನನ್ನು ಬಾಲಕಿಗೆ ದೌರ್ಜನ್ಯಗೈದ ಪ್ರಕರಣದಲ್ಲೂ, ತಾಯಿಯನ್ನು ಬಾಲನ್ಯಾಯ ಕಾನೂನು ಪ್ರಕಾರ ಬಂಧಿಸಲಾಗಿದೆ.