ಬಾಂಗ್ಲಾರನ್ನು ಭಾರತೀಯರನ್ನಾಗಿಸುವ ರ‍್ಯಾಕೆಟ್ ಕೇರಳದಲ್ಲಿ ಸಕ್ರಿಯ

ಕಾಸರಗೋಡು: ಬಾಂಗ್ಲಾದೇಶ ದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಅವರನ್ನು  ಭಾರತೀಯರನ್ನಾಗಿ ಸುವ ರ‍್ಯಾಕೆಟ್ ಕೇರಳ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಸಕ್ರಿಯವಾಗಿದೆ ಎಂಬ ಕಳವಳಕಾರಿ ಮಾಹಿತಿ ಕೇಂದ್ರ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.

 ಹೀಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ನುಸುಳುವವರಿಗೆ 15,0000 ರೂ.ನಿಂದ 25,೦೦೦ ರೂ. ತನಕ ನೀಡಿದಲ್ಲಿ ಅವರಿಗೆ ನಕಲಿ ಭಾರತೀಯ ಪಾಸ್‌ಪೋರ್ಟ್,  ಮತದಾರರ ಗುರುತುಚೀಟಿ, ಪಾನ್ ಕಾರ್ಡ್ ಇತ್ಯಾದಿಗಳನ್ನು  ನೀಡುವ ಹಲವು ರ‍್ಯಾಕೆಟ್‌ಗಳನ್ನು ಕೇರಳ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಕಾರ್ಯವೆ ಸಗುತ್ತಿರುವ ಮಾಹಿತಿಯೂ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಆದ್ದರಿಂದ ಅದನ್ನು ಬೇಧಿಸುವ ಯತ್ನ ದಲ್ಲೂ ಗುಪ್ತಚರ ವಿಭಾಗ ತೊಡಗಿದೆ.

ಪಶ್ಚಿಮ ಬಂಗಾಲದ ಮುರ್ಶಿದಾ ಬಾದ್ ಜಿಲ್ಲೆಯ  ಜಲಂಗಿ ಮೂಲಕವೇ ಬಾಂಗ್ಲಾದೇಶದವರು ಹೆಚ್ಚಾಗಿ ಅಕ್ರಮವಾಗಿ ಭಾರತದೊಳಗೆ   ನುಸುಳಿ ನಂತರ ರ‍್ಯಾಕೆಟ್‌ಗಳ ಸಹಾಯದಿಂದ ಅವರು ನಕಲಿ ಆಧಾರ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್ ಸೇರಿದಂತೆ ಇತರ ದಾಖಲುಪತ್ರ ಗಳೊಂದಿಗೆ ಪಶ್ಚಿಮ ಬಂಗಾಳದವರೆಂಬ ಸೋಗಿನಲ್ಲಿ ಕೇರಳ ಸೇರಿದಂತೆ ದೇಶಾದ್ಯಂತವಾಗಿ ನೆಲೆಸುತ್ತಿದ್ದಾರೆ. ಇದ ರಲ್ಲಿ ಹೆಚ್ಚಿನವರು ನಿರ್ಮಾಣ ಕೆಲಸದಲ್ಲಿ ತೊಡಗುತ್ತಾರೆ. ಹೀಗೆ ಭಾರತದೊಳಗೆ ಅಕ್ರಮವಾಗಿ  ನುಸುಳಿದವರಲ್ಲಿ  ಉಗ್ರ ಗಾಮಿ ಸಂಘಟನೆಗಳ ಸಕ್ರಿಯ ಕಾರ್ಯಕರ್ತರು ಒಳಗೊಂಡಿದ್ದಾರೆ. ಅಂತಹ ಉಗ್ರನೋರ್ವನ ಹೊಸದುರ್ಗ ಪಡನ್ನಕ್ಕಾಡಿನಿಂದ ಇತ್ತೀಚೆಗಷ್ಟೇ ಅಸ್ಸಾಂ ಪೊಲೀಸರು ಬಂಧಿಸಿದ್ದರು. ಮಾತ್ರವಲ್ಲದೆ ಬಾಂಗ್ಲಾದೇಶದ ಪ್ರಜೆಗಳಾದ ತಸ್ಲೀಮ ಬೀಗಂ (28) ಮತ್ತು ಆಕೆಯ ಪ್ರಿಯತಮ ಹೊನೈಸ್ (29) ಎಂಬ ವರನ್ನು ಎರ್ನಾಕುಳಂ ಪೆರುಂಬಾವೂರಿ ನಿಂದ ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಈ ಪೈಕಿ ಹೊನೈಸ್ ಹಿಂದೂ ಹೆಸರಲ್ಲಿ ಬಿಹಾರದ ವಿಳಾಸದಲ್ಲಿ ನಕಲಿ ಭಾರತೀಯ ಗುರುತುಚೀಟಿಗಳನ್ನು ಹೊಂದಿದ್ದರು. ಅದನ್ನು ಪೊಲೀಸರು ವಶಪಡಿಸಿದ್ದಾರೆ.

ಇದೇ ರೀತಿ ಕೇರಳದಲ್ಲಿ ಸಹಸ್ರಾರು ಮಂದಿ ಬಾಂಗ್ಲಾ ದೇಶದ ಪ್ರಜೆಗಳೂ ನಕಲಿ ಗುರುತುಚೀಟಿ ಪಡೆದು ಇಲ್ಲಿ ಅಕ್ರಮವಾಗಿ ನೆಲೆಸಿರುವುದು ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ.

ಸರಕಾರದ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ 40 ಲಕ್ಷದಷ್ಟು ಕಾರ್ಮಿಕರು ನೆಲೆಸಿದ್ದು, ಅವರು ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉಳಿದುಕೊಂಡು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದರಲ್ಲಿ ಸಹಸ್ರಾರು ಮಂದಿ ಅಕ್ರಮವಾಗಿ ಭಾರತಕ್ಕೆ ನುಸುಳಿ ಇಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆಂಬ ಮಾಹಿತಿಯೂ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಅಂತಹವರನ್ನು ಗುರುತಿಸಿ,  ಇಲ್ಲಿಂದ ಗಡಿಪಾರು ಮಾಡುವ ಯತ್ನದಲ್ಲೂ ಪೊಲೀಸರೂ ಇನ್ನೊಂದೆಡೆ ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page