ಚಿನ್ನದ ಬೆಲೆಯಲ್ಲಿ ನೂತನ ದಾಖಲೆ: ಪವನ್‌ಗೆ 60,200 ರೂ.

ಕಾಸರಗೋಡು: ಚಿನ್ನಾಭರಣ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ. ಇತಿಹಾಸದಲ್ಲೇ ಪ್ರಥಮವಾಗಿ 1 ಪವನ್ ಚಿನ್ನದ ಬೆಲೆ 60,000 ರೂ. ದಾಟಿದೆ. ಇಂದು 600 ರೂ. ಹೆಚ್ಚಾಗಿರುವುದರೊಂದಿಗೆ ಪವನ್ ಬೆಲೆ 60,200 ಆಗಿದೆ. ಗ್ರಾಂ 1ರ ಬೆಲೆ 75 ರೂ. ಹೆಚ್ಚಳವಾಗಿ 7525ಕ್ಕೆ ತಲುಪಿದೆ. ಕಳೆದ ಮೂರು ವಾರಗಳ ಮಧ್ಯೆ ಚಿನ್ನಕ್ಕೆ ಪವನ್ನಲ್ಲಿ 3000 ರೂ. ಹೆಚ್ಚಳವುಂಟಾಗಿದೆ. ಅಮೆರಿಕದಲ್ಲಿ 47ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡಿರುವು ದರೊಂದಿಗೆ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿ ಬಂದಿರುವುದೇ ಚಿನ್ನದ ಬೆಲೆಯಲ್ಲಿ ಈ ರೀತಿ ಏರಿಕೆ ಉಂಟಾಗಲು ಕಾರಣವೆಂದು ಅಭಿಪ್ರಾಯಪಡಲಾಗಿದೆ. ಪ್ರಧಾನ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್ನ ಮೌಲ್ಯದಲ್ಲಿ ಉಂಟಾದ ಕುಸಿತವೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪೋಟ್ ಗೋಲ್ಡ್ ಬೆಲೆ ಟ್ರಾಯ್ ಔನ್ಸ್ಗೆ 2719 ಡಾಲರ್ಗೆ ತಲುಪಿದೆ. ಕಮೋಡಿಟಿ ಎಕ್ಸ್ಚೇಂಜ್ ಆದ ಎಂಸಿಎಕ್ಸ್ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 81,413 ರೂ. ಆಗಿದೆ.

RELATED NEWS

You cannot copy contents of this page