ಮಗುಚಿಬಿದ್ದ ರೋಡ್ ರೋಲರ್
ಕಾಸರಗೋಡು: ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ರೋಡ್ ರೋಲರ್ ಚರಂಡಿಯಲ್ಲಿ ಬಿದ್ದು ಸಿಲುಕಿಕೊಂಡಿದೆ. ಇದೇ ವೇಳೆ ವಾಹನದಿಂದ ಹೊರಕ್ಕೆಸೆಯಲ್ಪಟ್ಟ ಚಾಲಕ ಅದೃಷ್ಟವಶಾತ್ ಅಪಾಯ ದಿಂದ ಪಾರಾಗಿದ್ದಾನೆ. ಚಟ್ಟಂಚಾಲ್ ನಿವಾಸಿಯಾದ ಮುಸ್ತಫ (55) ರಿಗೆ ಸಣ್ಣಪುಟ್ಟ ಗಾಯಗ ಳಾಗಿವೆ. ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಇಂದು ಬೆಳಿಗ್ಗೆ ೬ ಗಂಟೆ ವೇಳೆ ಘಟನೆ ನಡೆದಿದೆ. ತಚ್ಚಂಗಾಡ್ನ ಇಳಿ ಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ರೋಡ್ ರೋಲರ್ ಮಗುಚಿಬಿದ್ದಿದೆ.