4 ಕಿಲೋ ನಕಲಿ ಚಿನ್ನದೊಂದಿಗೆ 3 ಮಂದಿ ಸೆರೆ: ನಿಧಿ ಎಂದು ತಿಳಿಸಿ ವಂಚಿಸಲು ಯತ್ನಿಸಿದ ಅನ್ಯರಾಜ್ಯ ಕಾರ್ಮಿಕರು
ಹೊಸದುರ್ಗ: ನಾಲ್ಕು ಕಿಲೋ ನಕಲಿ ಚಿನ್ನದೊಂದಿಗೆ ಯುವತಿ, ಯುವಕರನ್ನು ಸೆರೆ ಹಿಡಿಯಲಾಗಿದೆ. ಕರ್ನಾಟಕ ಮಂಡ್ಯ ಸಾಗರ್ ಶ್ರೀರಂಗಪಟ್ಟಣದ ನಿವಾಸಿಗಳಾದ ಧರ್ಮ (42), ಶ್ಯಾಮ್ಲಾಲ್ (42) ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಶ್ಯಾಮ್ಲಾಲ್ನ ಪತ್ನಿ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ. ಹೂಮಾರಾಟಗಾರರಾಗಿದ್ದಾರೆ ಈ ಮೂವರು. ಚೆರ್ವತ್ತೂರಿನ ರೈಲು ನಿಲ್ದಾಣ ಸಮೀಪ ಬಾಡಿಗೆ ಕೊಠಡಿಯಲ್ಲಿ ಇವರು ವಾಸವಾಗಿದ್ದಾರೆ.
ಮಾಲೆಗಳನ್ನು ಓರ್ವ ಸಿನಿಮಾ ಕಾರ್ಯಕರ್ತನಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಧ್ಯೆ ವಂಚನೆ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಸಿನಿಮಾ ಕಾರ್ಯಕರ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನೇತೃತ್ವದ ತಂಡದ ಸದಸ್ಯ ಪ್ರಮೋದ್ರಿಗೆ ತಿಳಿಸಿದ್ದಾರೆ. ಬಳಿಕ ಪ್ರಮೋದ್ ನಾಲ್ಕು ದಿನಗಳಿಂದಾಗಿ ರಹಸ್ಯವಾಗಿ ತನಿಖೆ ನಡೆಸುತ್ತಿದ್ದರು. ಆರೋಗ್ಯ ಇಲಾಖೆಯ ನೌಕರ ಎಂಬ ನೆಪದಲ್ಲಿ ಅನ್ಯರಾಜ್ಯ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ವಂಚಕರನ್ನು ಪತ್ತೆಹಚ್ಚಲಾಗಿದೆ. ಬಳಿಕ ಚಂದೇರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್, ಎಸ್ಐ ಕೆ. ಸತೀಶ್, ಸ್ಕ್ವಾಡ್ ಸದಸ್ಯ ಪ್ರಮೋದ್, ಪೊಲೀಸರಾದ ಶ್ರೀಜು, ಶ್ರೀಜಿತ್, ಶರಣ್ಯ, ನರೇಂದ್ರನ್, ಅಜೇಶ್, ಸುರೇಶ್, ಚಾಲಕ ಎಂಬಿವರು ಸೇರಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದ ಸ್ಥಿತಿಯಲ್ಲಿ ಆಭರಣಗಳನ್ನು ಪತ್ತೆಹಚ್ಚಲಾಗಿದೆ. ಹೊಂಡ ತೆಗೆಯುವಾಗ ಲಭಿಸಿದ ನಿಧಿ ಇದಾಗಿದೆ ಎಂದು ಸೆರೆಯಾದವರು ಪೊಲೀಸರಲ್ಲಿ ತಿಳಿಸಿದ್ದಾರೆ. ತಾಮ್ರದ ಮೇಲೆ ಅತೀ ನಾಜೂಕಾಗಿ ಚಿನ್ನವನ್ನು ಲೇಪಿಸಿದ ಆಭರಣಗಳಾಗಿವೆ ಇವು. ಈ ತಂಡ ರಾಜ್ಯದಲ್ಲಿ ಬೇರೆಲ್ಲಾದರೂ ಇದಕ್ಕೆ ಸಮಾನವಾದ ವಂಚನೆ ನಡೆಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.