ಅರ್ಧ ಬೆಲೆಗೆ ವಾಹನ ಭರವಸೆಯೊಡ್ಡಿ ವಂಚನೆ: ಪ್ರಕರಣ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲು ಎಡಿಜಿಪಿ ಶಿಫಾರಸು
ತಿರುವನಂತಪುರ: ಅರ್ಧ ಬೆಲೆಗೆ ವಾಹನ ಸಹಿತ ವಿವಿಧ ಉಪಕರಣ ಗಳನ್ನು ಒದಗಿಸಿಕೊಡುವುದಾಗಿ ನಂಬಿಸಿ ಸಾವಿರಾರು ಮಂದಿಯಿಂದ ಹಣ ಪಡೆದು ವಂಚಿಸಿದ ಪ್ರಕರಣದ ತನಿಖೆ ಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲು ಎಡಿಜಿಪಿ ಮನೋಜ್ ಅಬ್ರಹಾಂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಈ ವಂಚನೆಯ ಸೂತ್ರಧಾರನಾದ ತೊಡುಪುಳ ನಿವಾಸಿ ಅನಂತುಕೃಷ್ಣ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಇದುವರೆಗೆ 72 ಕೇಸು ಗಳನ್ನು ದಾಖಲಿಸಲಾಗಿದೆ. ರಾಜ್ಯದಾ ದ್ಯಂತ 3600 ಮಂದಿ ದೂರುಗಳೊಂ ದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇದೀಗ ಲಭಿಸಿದ ದೂರುಗಳ ಪ್ರಕಾರ 500 ಕೋಟಿ ರೂಪಾಯಿವರೆಗೆ ವಂಚನೆ ನಡೆದಿರಬಹುದೆಂದು ಪೊಲೀಸ್ ಮೂಲಗಳು ಅಂದಾಜಿಸಿವೆ. ಅನಂತುಕೃಷ್ಣನನ್ನು ನ್ಯಾಯಾಲಯ ಐದು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಸಮಗ್ರ ತನಿಖೆಗೊಳ ಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
ರಾಜ್ಯದಾದ್ಯಂತ ಸೀಡ್ ಸೊಸೈಟಿ ಸದಸ್ಯರಿಂದ 40,000 ವಾಹನಗಳನ್ನು ನೀಡುವ ಹೆಸರಲ್ಲಿ ಅರ್ಧ ಬೆಲೆಯಾದ 60,000ಗಳನ್ನು ಪ್ರತಿಯೊಬ್ಬರಿಂದ ಅನಂತುಕೃಷ್ಣ ಪಡೆದುಕೊಂಡಿರುವುದಾಗಿ ಇದುವರೆಗೆ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದೇ ವೇಳೆ ಅನಂತುಕೃಷ್ಣ ನಡೆಸಿದ ಈ ವಂಚನೆ ಕುರಿತು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ಕೂಡಾ ಕೇಸು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.