ಮುಡಿಮಾರಿನಲ್ಲಿ ಯಕ್ಷಗಾನ ಬಯಲಾಟ, ಸನ್ಮಾನ 10ರಂದು
ಮುಡಿಮಾರು: ಇಲ್ಲಿನ ಚಂದ್ರಹಾಸ ಪೂಜಾರಿ ಮತ್ತು ಮಕ್ಕಳ ಸೇವೆಯಾಗಿ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಮಂಡಳಿ ಬಜ್ಪೆ ಇವರಿಂದ 25ನೇ ವರ್ಷದ ಸೇವೆಯಾಟ ಈ ತಿಂಗಳ 10ರಂದು ರಾತ್ರಿ ೮ಕ್ಕೆ ಮುಡಿಮಾರು ಬಾಕಿಮಾರು ಗದ್ದೆಯಲ್ಲಿ ಪ್ರದರ್ಶ ನಗೊಳ್ಳಲಿದೆ. ಶ್ರೀದೇವಿ ಮಹಾತ್ಮೆ ಕಥಾ ಭಾಗದಲ್ಲಿ ಖ್ಯಾತ ಕಲಾವಿದರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಿ.ಹಿಂ.ಪ. ಮಂಜೇಶ್ವರ ಮಂಡಲ ಅಧ್ಯಕ್ಷ ಕೃಷ್ಣ ಶಿವಕೃಪಾ ಅಧ್ಯಕ್ಷತೆ ವಹಿಸುವರು. ರಾಜ ಬೆಳ್ಚಪ್ಪಾಡ ಸಹಿತ ಹಲವರು ಭಾಗವಹಿಸುವರು. ಇದೇ ವೇಳೆ ಮೇಳದ ಅರ್ಚಕ ಡಿ. ಶ್ರೀಧರ ಮುಡತಾಯ, ಹಿರಿಯ ಕಲಾವಿದರಾದ ರಮೇಶ ಕುಲಶೇಖರ, ರಾಜರಾಮ ಬಂದಾರು, ಸತೀಶ್ ನೀರ್ಚಾಲ್, ಉದಯ ಸಿದ್ದಕಟ್ಟೆ, ವೆಂಕಪ್ಪ, ಸೀತಾ ರಾಮರನ್ನು ಸನ್ಮಾನಿಸಲಾಗುವುದು ಹಾಗೂ ಇತರ ಕಲಾವಿದರು, ಸಿಬ್ಬಂದಿ ಗಳನ್ನು ಗೌರವಿಸಲಾಗುವುದು. ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.