ತಾಯಿಯೊಂದಿಗೆ ಜಗಳ: ಪ್ರಶ್ನಿಸಿದ ತಮ್ಮನಿಗೆ ಅಣ್ಣನಿಂದ ಇರಿತ ; ಆರೋಪಿ ಸೆರೆ

ಕುಂಬಳೆ: ತಾಯಿಯೊಂದಿಗೆ ಜಗಳಕ್ಕಿಳಿದಿದ್ದನ್ನು ಪ್ರಶ್ನಿಸಿದ ದ್ವೇಷದಿಂದ ತಮ್ಮನಿಗೆ ಕತ್ತರಿಯಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಕಿದೂರು ಪಂಜಿಕ್ಕಲ್ ನಿವಾಸಿ ಜೋಸೆಫ್ (31) ಎಂಬಾತನ್ನು ಕುಂ ಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋ ದ್ ಕುಮಾರ್, ಎಸ್.ಐ ರಾಜೇಶ್ ಒಳಗೊಂಡ ತಂಡ ಬಂಧಿಸಿದೆ.  ಜೋಸೆಫ್‌ನ ಸಹೋದರ ಜೋಯ್ ಕಿಶೋರ್ (26) ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವೆಲ್ಡಿಂಗ್ ಕೆಲಸಕ್ಕೆ ತೆರಳಿ ಮರಳಿ ಮನೆಗೆ ಬಂದಾಗ ಸಹೋದರ ಜೋಸೆಫ್ ತಾಯಿ ಯೊಂದಿಗೆ ಜಗಳವಾಡುತ್ತಿದ್ದನು. ಅದನ್ನು ಪ್ರಶ್ನಿಸಿದಾಗ ಜೋಸೆಫ್ ಹೊಟ್ಟೆಗೆ ಗುದ್ದಿದ್ದು, ತಡೆಯಲೆತ್ನಿ ಸಿದಾಗ ಕತ್ತರಿಯಿಂದ ಇರಿದು ಕೊಲೆಗೈಯ್ಯಲೆತ್ನಿ ಸಿರುವುದಾಗಿ ಜೋಯ್ ಕಿಶೋರ್ ನೀಡಿದ  ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page