ಬಾಟ್ಲಿ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ಕಲ್ಲಿಕೋಟೆ: ಗಂಟಲಲ್ಲಿ ಬಾಟ್ಲಿಯ ಮುಚ್ಚಳ ಸಿಲುಕಿ ೮ ತಿಂಗಳ ಪ್ರಾಯದ ಗಂಡುಮಗು ಮೃತಪಟ್ಟಿದೆ. ಪೊನ್‌ಕುನ್ ಅಬೀನಾ ಹೌಸ್ ನಿಸಾರ್‌ರ ಪುತ್ರ ಮುಹಮ್ಮದ್ ಇಬಾದ್ ಮೃತಪಟ್ಟ ಮಗು. ಸೋಮವಾರ ರಾತ್ರಿ ಮುಚ್ಚಳ ಗಂಟಲಲ್ಲಿ ಸಿಲುಕಿಕೊಂಡ ಮಗುವನ್ನು ಕೋಟಪರಂಬ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗೆ ಮಗು ಮೃತಪಟ್ಟಿತ್ತು. ಇದೇ ವೇಳೆ ಸಾವಿನಲ್ಲಿ ನಿಗೂಢತೆಯಿದೆ ಎಂದು ಆರೋಪಿಸಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page