ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸಂಸ್ಮರಣೆ
ಕುಂಬಳೆ: ಬಿಜೆಪಿಯ ಸ್ಥಾಪಕ ಅಧ್ಯಕ್ಷ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಕುಂಬಳೆ ಮಂಡಲ ಸಮಿತಿ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿ ಮಾತನಾಡಿದರು. ನೂತನ ಮಂಡಲ ಸಮಿತಿಗೆ ಆಯ್ಕೆಯಾದ ಪದಾಧಿಕಾ ರಿಗಳನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಮಯ್ಯ ಸ್ವಾಗತಿಸಿ, ಕಾರ್ಯದರ್ಶಿ ಸುಮಿತ್‌ರಾಜ್ ಪೆರ್ಲ ವಂದಿಸಿದರು.
ಮಂಜೇಶ್ವರ: ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮೀಂಜದಲ್ಲಿ ಜರಗಿದ ಸ್ಮೃತಿ ದಿನಾಚರಣೆಯಲ್ಲಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ನುಡಿನಮನ ಸಲ್ಲಿಸಿದರು. ಮುಖಂಡರಾದ ಮಣಿಕಂಠ ರೈ, ಕೆ.ವಿ. ಭಟ್, ಪದ್ಮನಾಭ ರೈ, ಚಂದ್ರಹಾಸ ಪೂಜಾರಿ, ರವಿರಾಜ್, ಭಾಸ್ಕರ್ ಪೊಯ್ಯೆ, ಮುಂದಿಲ ಎಸ್.ಎನ್. ಭಟ್, ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಯತಿರಾಜ್ ಸ್ವಾಗತಿಸಿ, ವಂದಿಸಿದರು.