ಉಷ್ಣತೆ: ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಬಿಸಿಲಿಗೆ ಕೆಲಸ ನಿರ್ವಹಿಸದಂತೆ ನಿರ್ದೇಶ
ಕಾಸರಗೋಡು: ರಾಜ್ಯದಲ್ಲಿ ಉಷ್ಣತೆ ಮಟ್ಟ ಹೆಚ್ಚಿರುವುದರಿಂದ ಸೂರ್ಯನ ತಾಪ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬಿಸಿಲಿಗೆ ಕೆಲಸ ನಿರ್ವಹಿಸುವ ಕಾರ್ಮಿಕರ ಕೆಲಸದ ಸಮಯ ನಿಗದಿಪಡಿ ಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವ ರೆಗೆ 8 ಗಂಟೆ ಕೆಲಸದ ಸಮಯ ವಾಗಿದ್ದು, ಕಾರ್ಮಿಕರು ಮಧ್ಯಾಹ್ನ 12ರಿಂದ ಅಪರಾಹ್ನ 3 ಗಂಟೆ ವರೆಗೆ ವಿಶ್ರಾಂತಿ ಪಡೆಯಬೇಕಾಗಿದೆ. ಶಿಫ್ಟ್ ಮಧ್ಯಾಹ್ನ 12ಕ್ಕೆ ಕೊನೆಗೊಳಿಸಿ ಸಂಜೆ 3ಕ್ಕೆ ಆರಂಭಿಸುವ ರೀತಿಯಲ್ಲಿ ಕೆಲಸದ ಸಮಯ ನಿಗದಿಪಡಿಸಿರು ವುದಾಗಿ ಲೇಬರ್ ಕಮಿಶನರ್ ತಿಳಿಸಿದ್ದಾರೆ. ಮೇ 10ರ ವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ.