ನೀರ್ಚಾಲು: ಮದ್ದಿನ ಅಂಗಡಿ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಕರಿಮಣಿಸರ ಎಗರಿಸಿ ಪರಾರಿ

ನೀರ್ಚಾಲು: ಔಷಧಿ ಖರೀದಿಸ ಲೆಂದು ತಿಳಿಸಿ ಮದ್ದಿನ ಅಂಗಡಿಗೆ ತಲುಪಿದ ತಂಡ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ನೀರ್ಚಾಲು ಮೇಲಿನ ಪೇಟೆಯ ಲ್ಲಿರುವ ರಾಘವೇಂದ್ರ ಆಯುರ್ವೇ ದಿಕ್ ಮೆಡಿಕಲ್ ಸ್ಟೋರ್‌ನ ಮಾಲಕಿ ನೀರ್ಚಾಲು ಜೇನುಮೂಲೆಯ ಸರೋಜಿನಿ ಎಸ್.ಎನ್. ಭಟ್ ಅವರು ಈ ಬಗ್ಗೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ೩.೩೦ರ ವೇಳೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಇಬ್ಬರು ಮೆಡಿಕಲ್ ಬಳಿಗೆ ಬಂದಿದ್ದಾರೆ. ಈ ಪೈಕಿ ಓರ್ವ ಮೆಡಿಕಲ್‌ಗೆ ತೆರಳಿ ಔಷಧಿ ಕೇಳಿದಾನ. ಸರೋಜಿನಿ ಭಟ್ ಔಷಧಿ ನೀಡುತ್ತಿದ್ದಂತೆ ದುಷ್ಕರ್ಮಿಗಳು ಅವರ ಕುತ್ತಿಗೆಯಿಂದ ಸರ ಎಳೆದು ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ನ್ನಲಾಗಿದೆ.  ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ನೀರ್ಚಾಲು ಪೇಟೆ ಸಹಿತ ವಿವಿಧೆಡೆಗಳ ಸಿಸಿ ಕ್ಯಾಮರಾಗಳ ಪರಿಶೀಲನೆ  ಆರಂಭಿಸಿದ್ದಾರೆ.

You cannot copy contents of this page