ಯುವಕನಿಗೆ ಹಲ್ಲೆ: ೬ಮಂದಿ ವಿರುದ್ಧ ಕೇಸು

ಕುಂಬಳೆ: ಕುಬಣೂರು ಪಂಜದ ಸುನಿಲ್ ಕುಮಾರ್ (೩೨)ರಿಗೆ ಹಲ್ಲೆಗೈದು ಗಾಯ ಗೊಳಿಸಿದ ಘಟನೆಗೆ ಸಂಬಂಧಿಸಿ ಆರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಕುಬ ಣೂರು ಪಂಜ ಪರಿಸರ ನಿವಾಸಿಗಳಾದ ಧೀರಜ್, ರೋಶನ್, ಪ್ರದೀಶ್, ಕಿರಣ್, ಶಿವರಾಜ್, ರಜಿತ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಪಂಜದಲ್ಲಿ ನಡೆದು ಹೋಗುತ್ತಿದ್ದ ಸುನಿಲ್ ಕುಮಾರ್‌ನನ್ನು ಬೈಕ್‌ನಲ್ಲಿ ತಲುಪಿದ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿದೆ. ಜುಗಾರಿ ಕೇಂದ್ರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ತಂಡ ಹಲ್ಲೆಗೈದಿದೆ ಎಂದು ದೂರಲಾಗಿದೆ.

You cannot copy contents of this page