ಕಬ್ಬಿಣದ ಗೇಟು ಬಿದ್ದು 7ರ ಬಾಲಕಿ ಮೃತ್ಯು
ಚೆನ್ನೈ: ಮನೆಯ ಗೇಟು ತಲೆಗೆ ಬಿದ್ದು 7ರ ಬಾಲಕಿಗೆ ದಾರುಣ ಅಂತ್ಯ ಸಂಭವಿಸಿದೆ. ಚೆನ್ನೈ ನಂಗನಲ್ಲೂರಿನಲ್ಲಿ ಘಟನೆ ನಡೆದಿದೆ. ೨ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಮೃತಪಟ್ಟ ಬಾಲಕಿ. ತಂದೆ ಪುತ್ರಿಯನ್ನು ಶಾಲೆಯಿಂದ ಸ್ಕೂಟರ್ನಲ್ಲಿ ಕರೆತಂದು ಗೇಟು ಬಳಿಯಲ್ಲಿ ಬಿಟ್ಟು ತೆರಳಿದ್ದರು. ಬಾಲಕಿ ಗೇಟನ್ನು ತೆರೆದು ಒಳಗೆ ಪ್ರವೇಶಿಸಿದಳು. ಆ ಬಳಿಕ ತಂದೆ ಕಬ್ಬಿಣದ ಗೇಟನ್ನು ಮುಚ್ಚಿದರು. ಆ ವೇಳೆಗೆ ಗೇಟ್ ಮುರಿದು ಬಾಲಕಿಯ ಮೈಮೇಲೆ ಬಿದ್ದಿದೆ. ಇದರಿಂದ ತಲೆಗೆ ಗಂಭೀರ ಗಾಯವುಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲಾಗಲಿಲ್ಲ.