ದೇವರನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಅಡೆತಡೆ ನಿವಾರಣೆ- ಕೊಂಡೆವೂರುಶ್ರೀ

ಕೂಡ್ಲು: ನಮ್ಮಲ್ಲಿರುವ ಆಸ್ತಿ ಸಂಪತ್ತುಗಳು ದೇವರಿಗೆ ಸೇರಿದ್ದಾಗಿದೆ. ಆದ್ದರಿಂದ ದೇವರನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಮಾತ್ರವೇ ನಮ್ಮ ಎಲ್ಲಾ ಅಡೆತಡೆಗಳು ಪರಿ ಪೂರ್ಣವಾಗಿ ನಿವಾರಣೆಗೊಳ್ಳುವುದು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಮಣ್ಣಿಪ್ಪಾಡಿ ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವದ ಪ್ರಥಮ ದಿನ ಜರಗಿದ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇಂದಿನ ಯುವ ಪೀಳಿಗೆಗೆ ಆಧ್ಯಾ ತ್ಮಿಕತೆಯ ಬಗ್ಗೆ ಯಾವುದೇ ಅರಿವು, ಚಿಂತನೆ ಇಲ್ಲ. ಈ ಬಗ್ಗೆ ಯಾವುದೇ ಆಸಕ್ತಿಯೂ ಇಲ್ಲ. ಇದುವೇ ಇಂದು ಯುವಕರಲ್ಲಿ ಕಂಡು ಬರುವ ಕೆಟ್ಟ ಚಿಂತನೆಗಳಿಗೆ  ಪ್ರಮುಖ ಕಾರಣವೆಂದು ಧಾರ್ಮಿಕ ಭಾಷಣ ಮಾಡಿದ ನವೀನ್ ಎಲ್ಲಂಗಳ ಮಧೂರು ನುಡಿದರು.  ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮಾತನಾಡಿದರು. ದೈವಸ್ಥಾನ ನವೀಕರಣ ಸಮಿತಿ ಅಧ್ಯಕ್ಷ ನಾರಾಯಣನ್ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದರು. ಆನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ಪುರೋಹಿತರತ್ನ ಬ್ರಹ್ಮಶ್ರೀ ಕೇಶವ ಆಚಾರ್ಯ, ಮಧೂರು ಪಂ. ಅಧ್ಯಕ್ಷ ಕೆ. ಗೋಪಾ ಲಕೃಷ್ಣ, ತಾರಾನಾಥ್ ಕಾಪಿಕ್ಕಾಡ್ ಉಪಸ್ಥಿತರಿದ್ದರು. ಧೂಮಾವತಿ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ಉದಯಕುಮಾರ್ ಮನ್ನಿಪ್ಪಾಡಿ ಸ್ವಾಗತಿಸಿ, ಅಜಯ್ ಮನ್ನಿಪ್ಪಾಡಿ ವಂದಿಸಿದರು. ನಾಗೇಶ್ ಶೆಟ್ಟಿ ನಿರೂಪಿಸಿದರು. ನೃತ್ಯ ಸಿಂಚನ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

You cannot copy content of this page