ಮಂಜೇಶ್ವರ ಸ್ನೇಹಾಲಯದಿಂದ ಯುವಕ ನಾಪತ್ತೆ
ಉಪ್ಪಳ: ಒಂದು ವಾರ ಹಿಂದೆ ಮಂಜೇಶ್ವರ ಪಾವೂರಿನ ಸ್ನೇಹಾಲಯಕ್ಕೆ ತಲುಪಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಳ್ಳಾಲ ಅಲೆಕಳ ನಿವಾಸಿ ಇಸ್ಮಾಯಿಲ್‌ರ ಪುತ್ರ ಉಮ್ಮರ್ ಫಾರೂಕ್ (23) ನಾಪತ್ತೆಯಾದ ಯುವಕ. ಫೆ. 15ರಂದು ಮಧ್ಯಾಹ್ನ ದಿಂದ ಈತ ನಾಪತ್ತೆಯಾಗಿರು ವುದಾಗಿ ತಿಳಿಸಿ ತಾಯಿ ಮರಿಯಾ ಫಾತಿಮ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವಾರ ಹಿಂದೆ ಓರ್ವ ವೈದ್ಯನ ನಿರ್ದೇಶ ಪ್ರಕಾರ ಫಾರೂಕ್‌ನನ್ನು ಸ್ನೇಹಾಲಯಕ್ಕೆ ತಲುಪಿಸಲಾಗಿತ್ತು. ನಾಪತ್ತೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.