ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಣ: ಚಾಲಕನ ಸೆರೆ
ಕುಂಬಳೆ: ಶಾಲಾ ಮೈದಾನ ದಲ್ಲಿ ಅಪಾ ಯಕಾರಿ ರೀತಿ ಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸಿದ ಯುವಕನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಾರು ಕಸ್ಟಡಿಗೆ ತೆಗೆಯಲಾಗಿದೆ.
ಬಂದ್ಯೋಡು ಅಡ್ಕ ವೀರನಗರದ ಮಹಮ್ಮದ್ ಶಡ್ಮಾನ್ (21) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ಘಟನೆ ನಡೆದಿದೆ. ಶಾಲಾ ಮೈದಾನದಲ್ಲಿ ಧೂಳು ಹಬ್ಬುತ್ತಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತಲುಪಿದಾಗ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸುವುದು ಕಂಡುಬಂದಿದೆ. ನೋಟೀಸು ನೀಡಿದ ಬಳಿಕ ಆರೋಪಿಯನ್ನು ಬಿಡುಗಡೆ ಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.