ರಸ್ತೆಯ ಮೋರಿ ಸಂಕ ಕುಸಿತ: ಮಧೂರಿನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ

ಮಧೂರು: ರಸ್ತೆಯ ಮೋರಿಸಂಕ ಕಸಿದುದರಿಂದ ಮಧೂರಿನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಮಧೂರು-ನೀರ್ಚಾಲು ರಸ್ತೆಯಲ್ಲಿ ಮಧೂರು ಪೇಟೆಯಲ್ಲೇ ಇರುವ ಮೋರಿಸಂಕ ಕುಸಿದಿದೆ. ಇದರಿಂದ ಆ ಮೂಲಕ ಸಂಚಾರಕ್ಕೆ ತಡೆಯೊಡ್ಡಿದ್ದು, ಬದಲಿ ವ್ಯವಸ್ಥೆ ಏರ್ಪಡಿಸಲಾಗಿದೆ. ಆದರೆ ಬದಲಿ ವ್ಯವಸ್ಥೆ ಏರ್ಪಡಿಸಿದ ಸ್ಥಳ ಇಕ್ಕಟ್ಟಾಗಿದ್ದು, ಇದರಿಂದ ವಾಹನಗಳು ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಬಸ್ ಸಹಿತ ಘನ ವಾಹನಗಳಿಗೆ ಇಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಮಳೆ ಸುರಿಯುವ ವೇಳೆ ಇಲ್ಲಿ ಕೆಸರಿನ ಹಳ್ಳ ನಿರ್ಮಾಣ ವಾಗುತ್ತಿದ್ದು,  ದ್ವಿ ಚಕ್ರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬೆಳಿಗ್ಗೆ ಹೊತ್ತಿನಲ್ಲಿ ಮಧೂರು ಕ್ಷೇತ್ರ ದರ್ಶನಕ್ಕಾಗಿ ಬರುವವರ ವಾಹನಗಳ ಸಂಖ್ಯೆ ಹೆಚ್ಚಿದ್ದು, ಈ ವೇಳೆ ಇಲ್ಲಿ ಸಂಚಾರಕ್ಕೆ ಸಂದಿಗ್ಧತೆ ಎದುರಾಗಿದೆ. ಕಳೆದ ಎರಡು ವಾರಗಳಿಂದ ಇಲ್ಲಿ ಸಮಸ್ಯೆ ಕಾಡುತ್ತಿದ್ದರೂ ಮೋರಿ ಸಂಕ ದುರಸ್ತಿಗೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page