ಅಸೌಖ್ಯ ಬಾಧಿಸಿ ಮೃತ್ಯು

ಕಾಸರಗೋಡು: ನೆಲ್ಲಿಕುಂಜೆ ಬೀರಂತಬೈಲು ನಿವಾಸಿ ಪಿ. ಎಸ್. ಗುಡ್ಡೆ ನಿವಾಸಿ ರಾಮ ಯಾನೆ ಸಂಜೀವ ಕೊಪ್ಪಳ ಎಂಬವರ ಪುತ್ರ ಪಿ.ಎಸ್. ಚಂದ್ರ (51) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಹಿಂದೆ ಕೆಎಸ್‌ಇಬಿಯಲ್ಲಿ ತಾತ್ಕಾಲಿಕ ನೌಕರನಾಗಿದ್ದ ಇವರು ಪ್ರಸ್ತುತ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ರಸಿಕ, ಭಾಗ್ಯಶ್ರೀ, ಸಹೋದರ- ಸಹೋದರಿಯರಾದ ರವಿಚಂದ್ರ, ಸೀತಾದೇವಿ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಚಂದ್ರರ ತಾಯಿ ರಾಧಾ ಹಾಗೂ ಇನ್ನೋರ್ವ ಸಹೋದರ ಪ್ರಕಾಶ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page