68.317 ಗ್ರಾಂ ಮಾದಕವಸ್ತು, ನಗದು ಪತ್ತೆ: ಓರ್ವ ಸೆರೆ


ಕಾಸರಗೋಡು: ಅಬಕಾರಿ ತಂಡ ಕಳನಾಡು ದೇಳಿ ಕುನ್ನುಪಾರದಲ್ಲಿ ನಿನ್ನೆ ಮನೆಯೊಂದರಲ್ಲಿ ನಡೆಸಿದ ತಪಾಸಣೆಯಲ್ಲಿ 68.317 ಗ್ರಾಂ ಮಾದಕದ್ರವ್ಯವಾದ ಮೆಥಾಫಿ ಟಾಮಿನ್ ಹಾಗೂ 40,000 ರೂ. ನಗದು ವಶಪಡಿಸಿದೆ. ಇದಕ್ಕೆ ಸಂಬAಧಿಸಿ ಪ್ರಸ್ತುತ ಮನೆಯ ಮಹಮ್ಮದ್ ರೈಸ್ ಎಂಬಾತನನ್ನು ಬಂಧಿಸಲಾಗಿದೆ.
ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಸರ್ಕಲ್ ಇನ್ ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ಗಳಾದ ನೌಶಾದ್ ಕೆ, ಅಜೀಶ್, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಸೆಬಾಸ್ಟಿನ್, ಅತುಲ್ ಟಿ.ವಿ, ಧನ್ಯ ಟಿ ಮತ್ತು ಸಜೀಶ್ (ಚಾಲಕ) ಎಂಬವರನ್ನೊಳಗೊAಡ ತಂಡ ನಿನ್ನೆ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಿದೆ.
ಬಂಧಿತನನ್ನು ನಂತರ ನ್ಯಾಯಾಲ ಯದಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈತನ ವಿರುದ್ಧ ಇದೇ ರೀತಿಯ ಬೇ ರೊಂದು ಕೇಸು ಕೂಡಾ ಇದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page