ಇಬ್ಬರು ಆಟೋ ಚಾಲಕರು ನೇಣು ಬಿಗಿದು ಮೃತಪಟ್ಟ ಸ್ಥ್ತಿತಿಯಲ್ಲಿ ಪತ್ತೆ
ಕಾಸರಗೋಡು: ಪೆರಿಯದ ಇಬ್ಬರು ಆಟೋ ಚಾಲಕರು ವಿಭಿನ್ನ ಸ್ಥಳಗಳಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಐಎನ್‌ಟಿಯುಸಿ ಕಾರ್ಯಕರ್ತ, ಪೆರಿಯ ಆಟೋ ಸ್ಟ್ಯಾಂಡ್‌ನ ಆಟೋ ಚಾಲಕನಾದ ಪ್ರೇiನ್ (42)ರನ್ನು ಮನೆ ಸಮೀಪದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಿಗ್ಗೆ ಪತ್ತೆಹಚ್ಚಲಾಗಿದೆ. ಅಸೌಖ್ಯನಿಮಿತ್ತ ಮನೋವೇದನೆಯಲ್ಲಿದ್ದರೆನ್ನ ಲಾಗಿದೆ. ಇವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಇನ್ನೋರ್ವ ಆಟೋ ಚಾಲಕ ಪೆರಿಯ ಕೂಡಾನಂ ನಾರಾಯಣ ಎಂಬವರ ಪುತ್ರ ಸುಧೀಶ್ (40) ಬುಧವಾರ ರಾತ್ರಿ ನೇಣುಬಿಗಿದು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟಗೊಂಡಿಲ್ಲ. ಈ ಎರಡೂ ಘಟನೆಯಲ್ಲಿ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.