ಔಷಧಿಗೆಂದು ಬಂದು ಆಯುರ್ವೇದ ಮದ್ದಿನಂಗಡಿ ಮಾಲಕಿಯ ಸರ ಅಪಹರಣ : ಮೂರೂವರೆ ಪವನ್ ಚಿನ್ನದ ಸರ ಎಗರಿಸಿದ ಆರೋಪಿಗಳ ಬಂಧನ
ಬದಿಯಡ್ಕ: ನೀರ್ಚಾಲಿನಲ್ಲಿರುವ ಆಯುರ್ವೇದ ಮದ್ದಿನ ಅಂಗಡಿಗೆ ತಲುಪಿ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದೆ.
ಕರ್ನಾಟಕದ ಪುತ್ತೂರು ಕುಂಜೂರು ಪಂಜ ನಿವಾಸಿ ಶಂಸುದ್ದೀನ್ ಅಸ್ಕರ್ ಅಲಿ (28), ಪುತ್ತೂರು ಬನ್ನೂರಿನ ಬಿ.ಎ ನೌಶಾದ್ (37) ಎಂಬಿವರನ್ನು ಬದಿಯಡ್ಕ ಪೊಲೀಸ್ ಇನ್ಸ್ಪೆಕ್ಟರ್ ಕೆ. ಸುಧೀರ್, ಎಸ್ಐ ಕೆ.ಕೆ.ನಿಖಿಲ್ ಎಂಬಿವರ ನೇತೃತ್ವದಲ್ಲಿ ಬಂಧಿಸಲಾಗಿದೆ.
ಆರೋಪಿಗಳು ಮಂಗಳೂರಿನ ಜ್ಯುವೆಲ್ಲರಿಯಲ್ಲಿ ಮಾರಾಟಗೈದ ಸರವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಫೆಬ್ರವರಿ ೧೧ರಂದು ನೀರ್ಚಾಲು ಮೇಲಿನ ಪೇಟೆಯಲ್ಲಿರುವ ಆಯು ರ್ವೇದ ಮದ್ದಿನ ಅಂಗಡಿ ಸಮೀಪಕ್ಕೆ ಇಬ್ಬರು ಆರೋಪಿಗಳು ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ತಲುಪಿದ್ದರು. ಈ ಪೈಕಿ ಓರ್ವ ಮದ್ದಿನ ಅಂಗಡಿಗೆ ತೆರಳಿ ಎದೆನೋವು ನಿವಾರಣೆಗಾಗಿ ಔಷಧಿ ಕೇಳಿದ್ದನು. ಈ ವೇಳೆ ಅಂಗಡಿ ಮಾಲಕಿ ಎಸ್.ಎನ್. ಸರೋಜಿನಿ (64) ಔಷಧಿ ನೀಡುತ್ತಿದ್ದಾಗ ಆರೋಪಿ ಮಾಲೆ ಎಳೆದು ಅದೇ ಬೈಕ್ನಲ್ಲಿ ಪರಾರಿಯಾಗಿದ್ದನು. ವಿಷಯ ತಿಳಿದು ತಲುಪಿದ ಬದಿಯಡ್ಕ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಸೈಬರ್ ಸೆಲ್ನ ಸಹಾಯ ದೊಂದಿಗೆ ನಡೆಸಿದ ತನಿಖೆಯಲ್ಲಿ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆ. ಇದರಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸಲು ಸಾಧ್ಯವಾಗಿದೆ. ಬಂಧಿತ ಇಬ್ಬರು ಆರೋಪಿಗಳ ವಿರುದ್ಧವೂ ಕರ್ನಾಟಕದಲ್ಲಿ ಹಲವು ಪ್ರಕರಣಗಳಿವೆಯೆಂದೂ, ನೌಶಾದ್ ಮಂಜೇಶ್ವರ ನಕಲಿಚಿನ್ನ ಅಡವಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲೂ ಕೇಸು ದಾಖ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ತನಿಖಾ ತಂಡದಲ್ಲಿ ಎಎಸ್ಐ ಮೊಹಮ್ಮದ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಪ್ರಸಾದ್, ಶ್ರೀನೇಶ್ ಮೊದಲಾದವರಿದ್ದರು.