ಪಿಲಿಗೊಬ್ಬು, ಪಿಲಿನಲಿಕೆ ತರಬೇತಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಉಪ್ಪಳ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ಪಿಲಿಗೊಬ್ಬು ಮತ್ತು ಪಿಲಿನಲಿಕೆಯ ಉಚಿತ ತರಬೇತಿ ಹಾಗೂ 7ನೇ ಸೇವಾ ಯೋಜನೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಮಾ.1ರಂದು ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದಲ್ಲಿ ಜರಗಲಿದೆ. ಅಂದು ಬೆಳಿಗ್ಗೆ 9ರಿಂದ ಗೌರೀಗಣೇಶ ಮಹಿಳಾ ಭಜನಾ ಮಂಡಳಿ ಪ್ರತಾಪನಗರ ಇವರಿಂದ ಭಜನೆ, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು ಅಧ್ಯಕ್ಷತೆ ವಹಿಸುವರು. ಘಟಕದ ಅಧ್ಯಕ್ಷ ಉದಯ ಕುಮಾರ್ ಅಮ್ಮೇರಿ ಪ್ರಾಸ್ತಾವಿಕ ಮಾತನಾಡುವರು. ಫ್ರೆಂಡ್ಸ್ ಬಲ್ಲಾಲ್ಭಾಗ್ ಬಿರುವೆರ್ ಕುಡ್ಲ ಕೇಂದ್ರ ಸಮಿತಿ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಉದ್ಘಾಟಿಸುವರು. ಶ್ರೀ ಬೈದರ್ಕಳ ಗರಡಿ ಶೇಣಿ ಅನುವಂಶಿಕ ಆಡಳಿತ ಮೊಕ್ತೇಸರ ಬಿ.ಕೆ ಧರ್ಮಪಾಲ ಶೇಣಿ, ಸಮಾಜ ಸೇವಕ ಎಂ.ಮೋಹನ ಪೂಜಾರಿ ಮಂಗಲ್ಪಾಡಿ, ದೈವದ ಪಾತ್ರಿ ಶೇಖರ ಪೂಜಾರಿ ಮಂಗಲ್ಪಾಡಿ ಉಪಸ್ಥಿತರಿರುವರು. ಸಾಧಕರಾದ ಆದಿಶ್ರೀ ಎಸ್.ಎನ್, ಶಾರದಾತನಯ ಬಾಯಾರು, ಮೋಹನ್ ಕುಮಾರ್ ಎಲ್, ಎಂ. ಶ್ರೀನಿವಾಸ ಇವರನ್ನು ಅಭಿನಂದಿಸಲಾಗುವುದು.