ಕಾನತ್ತೂರಿನಲ್ಲಿ ಶೇಂದಿ ಅಂಗಡಿ ನೌಕರನಿಗೆ ಇರಿತ: ಆರೋಪಿಗೂ ಗಾಯ
ಮುಳಿಯಾರು: ಕಾನತ್ತೂರಿನಲ್ಲಿ ಶೇಂದಿ ಅಂಗಡಿ ನೌಕರನಿಗೆ ಇರಿಯಲಾಗಿದೆ. ಕುತ್ತಿಕ್ಕೋಲ್ ನೆಲ್ಲಿತ್ತಾವ್ ನಿವಾಸಿ ರಮೇಶ್ ಬಾಬು (40) ಇರಿತದಿಂದ ಗಾಯಗೊಂಡಿ ದ್ದಾರೆ. ಇವರನ್ನು ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನತ್ತೂರಿನ ದಿಪಿನ್ (34) ಇರಿದು ಗಾಯಗೊಳಿಸಿರುವುದಾಗಿ ರಮೇಶ್ ಬಾಬು ದೂರಿದ್ದಾರೆ. ಇದೇ ವೇಳೆ ತಂಡದಿಂದ ಹಲ್ಲೆಗೊಂಡ ಸ್ಥಿತಿಯಲ್ಲಿ ದಿಪಿನ್ನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಈ ಮೊದಲು ಕಾನತ್ತೂರಿನಲ್ಲಿ ಅಬಕಾರಿ ದಳ ನಡೆಸಿದ ತಪಾಸಣೆಯ ಹಿಂದೆ ರಮೇಶ್ ಬಾಬು ಎಂದು ಆರೋಪಿಸಿ ದಿಪಿನ್ ಗಾಜಿನ ಚೂರಿನಿಂದ ಇರಿದು ಗಾಯಗೊಳಿ ಸಿರುವುದೆಂದು ಶಂಕಿಸಲಾಗಿದೆ.