ಕ.ಸಾ.ಪ ದತ್ತಿ ಉಪನ್ಯಾಸ, ಕವಿ ಕಾವ್ಯ ಸಂವಾದ ನಾಳೆ

ಬದಿಯಡ್ಕ: ಕ.ಸಾ.ಪ ಕೇರಳ ಗಡಿನಾಡ ಘಟದ ಆಶ್ರಯದಲ್ಲಿ ಎಂ.ಕೆ. ಜಿನಚಂದ್ರನ್ ದತ್ತಿ ಹಾಗೂ ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ ನಾಳೆ ಅಪರಾಹ್ನ 2.30ಕ್ಕೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.  ಆಯಿಷಾ ಪೆರ್ಲ ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸ, ಡಾ. ಸುಭಾಷ್ ಪಟ್ಟಾಜೆ ಕಮಲಮ್ಮ ದತ್ತಿ ಉಪನ್ಯಾಸ ನೀಡುವರು. ನಯನ ಗಿರೀಶ್ ಅಡೂರು ಮುಖ್ಯ ಅತಿಥಿಯಾಗಿರುವರು. ಪ್ರದೀಪ್ ಕುಮಾರ್ ಶೆಟ್ಟಿ, ವಿಶಾಲಾಕ್ಷ ಪುತ್ರಕಳ, ಶೇಖರ ಶೆಟ್ಟಿ ಬಾಯಾರು ಭಾಗವಹಿಸುವರು. ಬಳಿಕ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕರ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಸಂವಾದ ನಡೆಯಲಿದೆ. ಥೋಮಸ್ ಡಿಸೋಜ, ಸುಂದರ ಬಾರಡ್ಕ, ದಿವ್ಯಾ ಗಟ್ಟಿ ಪರಕ್ಕಿಲ ಸಹಿತ ಹಲವರು ಭಾಗವಹಿಸುವರು.

RELATED NEWS

You cannot copy contents of this page