ಸಿಪಿಎಂ ಆಡಳಿತದಲ್ಲಿ ಸ್ವಜನ ಪಕ್ಷಪಾತ-ಸುಂದರ ಆರಿಕ್ಕಾಡಿ ಆರೋಪ
ಬಾಯಾರು: ಕಳೆದ 9 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ಸ್ವಜನ ಪಕ್ಷಪಾತ ನಡೆಸುತ್ತಿದ್ದು ಕೊಲೆಗೆಡುಕರಿಗೆ, ಅಮಲು ಪದಾರ್ಥ ಸರಬರಾಜುದಾರರಿಗೆ ಒತ್ತಾಸೆ ನೀಡುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಆರೋಪಿಸಿದರು. ಸಿಪಿಎಂನ ಈ ಕಪಟ ಮುಖ ಜನಸಾಮಾನ್ಯರಿಗೆ ಬೇಸರ ತರಿಸಿದ್ದು, ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆಂದು ಅವರು ಅಭಿಪ್ರಾಯಪಟ್ಟರು. ಪೈವಳಿಕೆ ಪಂಚಾಯತ್ ಸುದೆಂಬಳ ವಾರ್ಡ್ ಮಹಾತಾಮಾಗಾಂಧಿ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಸುಂದರ ಸುದೆಂಬಳ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ವಸಂತ ಕುಮಾರ್, ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ಭಟ್, ಮಂಡಲ ಉಪಾಧ್ಯಕ್ಷ ಶಾಜಿ ಎನ್.ಸಿ, ಅಬ್ದುಲ್ ರಜಾಕ್ ಮಾತನಾಡಿದರು. ಸಿಪಿಎಂ ಹಾಗೂ ಇತರ ಪಕ್ಷಗಳಿಂದ ಕಾಂಗ್ರೆಸ್ ಸೇರಿದ 30 ಮಂದಿ ಕಾರ್ಯಕರ್ತರನ್ನು ಸ್ವಾಗತಿಸಲಾ ಯಿತು. ನೂತನ ಸಮಿತಿ ರೂಪೀಕರಿಸ ಲಾಯಿತು. ಸಾದಿಕ್ ಪಡೀಲ್ ಅಧ್ಯಕ್ಷರಾಗಿ, ಮುಹಮ್ಮದ್, ಸುಂದರ, ಲತೀಫ್ ಉಪಾಧ್ಯಕ್ಷರಾಗಿ, ಶ್ರೇಯಸ್ ಕೋಡಿ, ನವಾಸ್, ಶರೀಫ್ ಕೋಡಿ ಕಾರ್ಯದರ್ಶಿ ಗಳಾಗಿ, ಅಶ್ರಫ್ ಕೋಶಾಧಿಕಾರಿ ಯಾಗಿ ಆಯ್ಕೆಯಾದರು. ಅಶ್ರಫ್ ಧರ್ಮತ್ತಡ್ಕ ಸ್ವಾಗತಿಸಿ, ನವಾಸ್ ವಂದಿಸಿದರು.