ನೆರೆಮನೆ ನಿವಾಸಿಗಳಾದ ನಗರಸಭೆ ಮಾಜಿ  ನೌಕರ, ವ್ಯಾಪಾರಿ ಗಂಟೆಗಳೊಳಗೆ ನಿಧನ

ಕಾಸರಗೋಡು: ನೆರೆಮನೆ ನಿವಾಸಿಗಳಾದ ಇಬ್ಬರು ಗಂಟೆಗಳ ವ್ಯತ್ಯಾಸದಲ್ಲಿ ನಿಧನಹೊಂದಿದರು. ಕಾಸರಗೋಡು ನಗರದ ಅಶೋಕನಗರ ಗಣೇಶ ನಿಲಯದ ವರದರಾಜ (60)ಎಂಬವರು ನಿನ್ನೆ ಅಪರಾಹ್ನ 3 ಗಂಟೆ ವೇಳೆ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಕಾಸರಗೋಡು ನಗರಸಭೆಯ ನಿವೃತ್ತ ನೌಕರನಾದ ಇವರು ಅಶೋಕನಗರ ಅಶೋಕ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರೂ, ಸಾಮಾಜಿಕ ಕಾರ್ಯ ಕರ್ತ ಹಾಗೂ ಕ್ರಿಕೆಟ್ ಆಟಗಾರನೂ ಆಗಿದ್ದರು. ಮೃತರು ಪತ್ನಿ ಕೆ.ವಿ.ಉಷಾ  ಕುಮಾರಿ ಮಕ್ಕಳಾದ ಶ್ರೇಯ, ವರ್ಷ, ಅಳಿಯ ರಕ್ಷಿತ್, ಸಹೋದರರಾದ ಮೋಹನ್‌ರಾವ್, ಯಾದವೇಂದ್ರ ಯಾನೆ ಶ್ಯಾಮ್, ಭುಜಂಗ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಶೋಕನಗರ ಲೀಲ ನಿಲಯದ ಶಾಂತಾರಾಮ (75) ನಿನ್ನೆ ರಾತ್ರಿ ನಿಧನಹೊಂದಿದರು. ಇವರು ನಗರದಲ್ಲಿ ಹಲವು ವರ್ಷಗಳಿಂದ ವ್ಯಾಪಾರಿಯಾಗಿ ದ್ದರು. ಮೃತರ ಪತ್ನಿ ಗೀತಾ, ಮಕ್ಕಳಾದ ದಿವ್ಯಾ, ಅವಿನಾಶ್, ಅಖಿಲೇಶ್, ಅಳಿಯ ಅಜಯ್, ಸೊಸೆಯಂದಿರಾದ ರಂಜಿನಿ, ರಮ್ಯ, ಸಹೋದರ-ಸಹೋದರಿ ಯರಾದ ವಸಂತ, ಚಂದ್ರಾವತಿ, ವಿಮಲ, ಪಾಂಡುರಂಗ, ಬಾಲರಾಜ್, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page