ಕಡವೆಯನ್ನು ಕೊಂದು ಮಾಂಸ ಮಾರಾಟಗೈದ ಇಬ್ಬರ ಬಂಧನ
ಕಾಸರಗೋಡು: ಕಡವೆ ಎಂಬ ವನ್ಯ ಜೀವಿಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸ ಮಾರಾಟಗೈದ ಹಾಗೂ ಪದಾರ್ಥ ಮಾಡಿದ ಇಬ್ಬರು ಸೆರೆಗೀಡಾಗಿದ್ದಾರೆ. ಕುಳಿಮಾಡ ಎಂಬಲ್ಲಿನ ಮುತ್ತ್ತಾನಿ ವೀಟಿಲ್ ಬಿಜು (43), ಕಣ್ಣಂವಯಲ್ ಬಿನು (36) ಎಂಬಿವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕುಳಿಮಾಡ ಎಂಬಲ್ಲಿನ ವ್ಯಕ್ತಿಯೊ ಬ್ಬರ ಹಿತ್ತಿಲಿನಲ್ಲಿ ಪತ್ತೆಯಾದ ಪ್ರಾಣಿಯನ್ನು ಆರೋಪಿಗಳು ಗುಂಡಿಕ್ಕಿ ಕೊಲೆಗೈದಿದ್ದರು. ಬಳಿಕ ಅದರ ಮಾಂಸ ಪದಾರ್ಥ ಮಾಡಿ ಅವಶಿಷ್ಟಗಳನ್ನು ಹೂತು ಹಾಕಿದ್ದರು. ಈ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಅರಣ್ಯ ಇಲಾಖ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಮನೆ ಹಾಗೂ ಪರಿಸರವನ್ನು ಪರಿಶೀಲಿಸಿದಾಗ ಅವಶಿಷ್ಟಗಳು ಪತ್ತೆಯಾಗಿತ್ತು. ಬಳಿಕ ನಡೆಸಿದ ತನಖೆಯಲ್ಲಿ ಇಬ್ಬರು ಸೆರೆಗೀಡಾಗಿ ದ್ದಾರೆ. ವನ್ಯಮೃಗಗಳನ್ನು ಬೇಟೆಯಾ ಡುವ ಭಾರೀ ತಂಡ ಕಾರ್ಯಾಚರಿಸು ತ್ತಿರುವುದಾಗಿ ಮಾಹಿತಿ ಲಭಿಸಿದೆ ಯೆಂದೂ, ಈ ಹಿನ್ನೆಲೆಯಲ್ಲಿ ಆರೋ ಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿ ರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.