ಭಾರ್ಗವಿ ಕುಟ್ಟಿ ಟೀಚರ್‌ಗೆ ಎಕೆಪಿಎ ಈಸ್ಟ್ ಘಟಕದಿಂದ ಗೌರವ

ಕಾಸರಗೋಡು: ವಿವಿಧ ರಂಗಗಳಲ್ಲಿ ಸಮಾಜಸೇವೆ ನಡೆಸುತ್ತಿರುವ  ಭಾರ್ಗವಿ ಕುಟ್ಟಿ ಟೀಚರ್‌ರನ್ನು ಎಕೆಪಿಎ ಕಾಸರ ಗೋಡು ಈಸ್ಟ್ ಘಟಕ ಸಮಿತಿ ವತಿ ಯಿಂದ ಗೌರವಿಸಲಾಯಿತು. ಮಹಿಳಾ ದಿನದಂಗವಾಗಿ ನಡೆದ  ಕಾರ್ಯಕ್ರಮ ದಲ್ಲಿ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುಜಿತ್,  ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ದಿನೇಶ್, ಮಣಿ ಭಾಗವಹಿಸಿದರು.

ಬಡವರಿಗೆ ಬಲತುಂಬಲು, ವಸತಿ ಇಲ್ಲದವರಿಗೆ ಸ್ನೇಹ ಭವನ ನಿರ್ಮಿಸಿ ನೀಡಲು, ನಿರುದ್ಯೋಗಿಗಳಾದ ಮಹಿಳೆ ಯರಿಗೆ ಉದ್ಯೋಗ ವಲಯಕ್ಕೆ ತಲು ಪುವ ರೀತಿಯಲ್ಲಿ ಹಲವು ಯೋಜನೆ ಗಳನ್ನು ಕೈಗೊಂಡ ಭಾರ್ಗವಿ ಟೀಚರ್ ನಿವೃತ್ತರಾಗಿಯೂ ಸ್ಕೌಟ್ ಆಂಡ್ ಗೈಡ್ಸ್ ಸಂಸ್ಥೆಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸು ತ್ತಿರುವ ಹಿನ್ನೆಲೆಯಲ್ಲಿ ಎಕೆಪಿಎ ಈಸ್ಟ್ ಯೂನಿಟ್ ಇವರನ್ನು ಗೌರವಿಸಿದೆ.

RELATED NEWS

You cannot copy contents of this page