ಮಾದಕದ್ರವ್ಯ ವಿರುದ್ಧ ಡಿಫಿ ಮಂಜೇಶ್ವರ ಬ್ಲೋಕ್ ಸಮಾವೇಶ 16ರಂದು
ಮಂಜೇಶ್ವರ: ಮಾದಕದ್ರವ್ಯ ವಿರೋಧಿ ಚಟುವಟಿಕೆಗಳ ವಿರುದ್ಧ ಹಾಗೂ ಹೆಚ್ಚುತ್ತಿರುವ ಆಕ್ರಮಣ, ಹಿಂಸೆಯ ವಿರುದ್ಧ ಡಿವೈಎಫ್‌ಐ ರಾಜ್ಯ ದಾದ್ಯಂತ ವಿವಿಧ ಕಾರ್ಯಕ್ರಮ ನಡೆಸುತ್ತಿದ್ದು, ಮಂಜೇಶ್ವರ ಬ್ಲೋಕ್ ಮಟ್ಟದ ಯುವಜನ ಸಮಾವೇಶ ಈ ತಿಂಗಳ 16ರಂದು ಅಪರಾಹ್ನ 2 ಗಂಟೆಗೆ ಮೀಯಪದವು ಮಾರ್ಕೆಟ್ ಹಾಲ್‌ನಲ್ಲಿ ನಡೆಯಲಿದೆ. ಡಿವೈಎಫ್‌ಐ ರಾಜ್ಯ ಸಮಿತಿ ಮಾಜಿ ಕೋಶಾಧಿಕಾರಿ ವಿ.ವಿ. ರಮೇಶನ್, ಜಿಲ್ಲಾ ಕಾರ್ಯದರ್ಶಿ ರಜೀಶ್ ಮೆಲ್ಲಾಟ್ ಭಾಗವಹಿಸುವರು. ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕೆಂದು ಡಿಫಿ ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ಅಬ್ದುಲ್ ಹಾರೀಸ್, ಅಧ್ಯಕ್ಷ ವಿನಯ ಕುಮಾರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.