ಯುವತಿಗೆ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಕುಡಿಸಿ ಖಾಸಗಿ ಫೋಟೋ ತೆಗೆದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಮದ್ಯ ಬೆರೆಸಿದ ಜ್ಯೂಸ್ ಕುಡಿಸಿ ಯುವತಿಯ ಖಾಸಗಿ ಫೋಟೋ ತೆಗೆದ ದೂರಿ ನಂತೆ ಯುವಕನ ವಿರುದ್ಧ ಚಂದೇರಾ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಕಲ್ಲಿಕೋಟೆ  ವಡಗರ ವಿಲ್ಯಾ ಪಳ್ಳಿ ನಿವಾಸಿ ಮುಹಮ್ಮದ್ ಯಾಸಿನ್ (26) ಬಂಧಿತ ಆರೋಪಿ. ಚಂದೇರ ಪೊಲೀಸ್ ಠಾಣೆ  ವ್ಯಾಪ್ತಿಗೊಳಪಟ್ಟ ಯುವತಿಯೋರ್ವೆ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಪತಿಯಿಂದ ಬೇರ್ಪಟ್ಟು ಜೀವಿಸುತ್ತಿರುವ ಈ ಯುವತಿ  ನವ ಮಾಧ್ಯಮಗಳ ಮೂಲಕ ಆರೋಪಿಯನ್ನು ಕಳೆದ ವರ್ಷ ಪರಿಚಯಗೊಂಡಿದ್ದಳು. ಆ ಬಳಿಕ ಒಂದು ದಿನ ಆರೋಪಿ ತನಗೆ ಜ್ಯೂಸ್‌ನಲ್ಲಿ ಮದ್ಯ  ಬೆರೆಸಿ ಕುಡಿಸಿ ನನ್ನ ಖಾಸಗಿ ಪೋಟೋಗಳನ್ನು ತೆಗೆದು, ಅದನ್ನು  ನನ್ನ ಪತಿ, ಮಕ್ಕಳು ಮತ್ತು ಕುಟುಂಬದವರಿಗೆ ಕಳುಹಿ ಸಿಕೊಡುವುದಾಗಿ ಬೆದರಿಸಿದನೆಂದೂ ಪೊಲೀಸರಿಗೆ ನೀಡಿದ ದೂರಿಲ್ಲಿ ಯುವತಿ ಆರೋಪಿಸಿದ್ದಾಳೆ. ಅದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಯನ್ನು ಬಂಧಿಸಿ, ನಂತರ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದಾರೆ.

You cannot copy contents of this page