ಶಾಲಾ ವಾಹನದಿಂದಿಳಿದ ವಿದ್ಯಾರ್ಥಿನಿಗೆ ಅದೇ ಬಸ್ ಢಿಕ್ಕಿಯಾಗಿ ಮೃತ್ಯು
ಕಲ್ಲಿಕೋಟೆ: ಶಾಲಾ ವಾಹನದಿಂದ ಇಳಿದ ವಿದ್ಯಾರ್ಥಿನಿ ಅದೇ ವಾಹನದ ಅಡಿಗೆ ಬಿದ್ದು ಮೃತಪಟ್ಟಿದ್ದಾಳೆ. ನಲ್ಲಳಂ ನಿವಾಸಿ ವಿ.ಪಿ. ಹಫ್ಸಲ್- ಸುಮಯ್ಯ ದಂಪತಿ ಪುತ್ರಿ ಸನ್ಹಾ ಮರಿಯಾ (8) ಮೃತಪಟ್ಟ ಬಾಲಕಿ. ನಿನ್ನೆ ಸಂಜೆ ನಾಲ್ಕೂವರೆ ವೇಳೆ ಕುಂಡಾಯಿ ತ್ತೋಡ್ನಲ್ಲಿ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿಯನ್ನು ಬಸ್ನಿಂದ ಇಳಿಸಿದ ಬಳಿಕ ವಾಹನವನ್ನು ಹಿಂದಕ್ಕೆ ತೆಗೆಯುವ ವೇಳೆ ಬಾಲಕಿಗೆ ಗುದ್ದಿದ್ದು, ಬಿದ್ದ ಬಾಲಕಿಯ ದೇಹದ ಮೇಲೆ ಬಸ್ ಹತ್ತಿ ಇಳಿದಿದೆ.
ಬಾಲಕಿ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೃತದೇಹವನ್ನು ಶವಾಗಾರಕ್ಕೆ ತಲುಪಿಸಲಾಗಿದೆ. ಚೆರುವಣ್ಣೂರ್ ವೆಸ್ಟ್ ಎಲ್ಪಿ ಶಾಲೆಯ ೨ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ತಂದೆ, ತಾಯಿ, ಸಹೋದರರಾದ ರಬೀಹ್, ಯಸೀದ್ರನ್ನು ಅಗಲಿದ್ದಾಳೆ.