ಜಿಲ್ಲೆಯಲ್ಲಿ ವ್ಯಾಪಕಗೊಂಡ ಮಾದಕವಸ್ತು ದಂಧೆ: ಗಾಂಜಾ ಸಹಿತ ಮತ್ತಿಬ್ಬರ ಸೆರೆ
ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಉಪಯೋಗದ ವಿರುದ್ಧ ಅಬಕಾರಿ ಇಲಾಖೆ ಕಾರ್ಯಾ ಚರಣೆ ತೀವ್ರಗೊಳಿಸಿರುವಾಗ ಜಿಲ್ಲೆಗೆ ಗಾಂಜಾ, ಎಂಡಿಎಂಎ ಸಹಿತ ಮಾದಕವಸ್ತುಗಳು ಯಥೇಷ್ಠವಾಗಿ ಹರಿದುಬರುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಭಾರೀ ಪ್ರಮಾ ಣದ ಮಾದಕವಸ್ತು ವಶಪಡಿಸಲಾಗಿದೆ. ಮಾದಕವಸ್ತು ದಂಧೆಗೆ ಶಾಶ್ವತ ಕಡಿವಾಣ ಹಾಕುವ ಉದ್ದೇಶದಿಂದ ಅಬಕಾರಿ ಇಲಾಖೆ ಹಾಗೂ ಪೊಲೀಸರು ಕ್ರಮ ಮುಂದುವರಿಸಿದ್ದು ಈ ಮಧ್ಯೆ ಗಾಂಜಾ ಕೈವಶವಿರಿಸಿಕೊಂಡ ಹಲವರು ಸೆರೆಗೀಡಾಗುತ್ತಿದ್ದಾರೆ. ಚೆಂಗಳ ಕುಂಡಡ್ಕದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ರಾಹುಲ್ (27) ಎಂಬಾತನನ್ನು ಸೆರೆಹಿಡಿದು ಕೇಸು ದಾಖಲಿಸಲಾಗಿದೆ.
ನೀಲೇಶ್ವರ ತೆಕ್ಕೆಕಡಪುರಂ ಮೊಹಮ್ಮದ್ ಅಸರುದ್ದೀನ್ ಎ.ಪಿ (27) ಎಂಬಾತನನ್ನು ಗಾಂಜಾ ಸಹಿತ ಸೆರೆಹಿಡಿಯಲಾಗಿದೆ. ನೀಲೇಶ್ವರ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಎನ್. ವೈಶಾಖ್ ನೇತೃತ್ವದ ತಂಡ ತೆಕ್ಕೇಕ ಡಪ್ಪುರದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಆರೋಪಿಯನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.