ದೈವ ಕಲಾವಿದ ನಾಪತ್ತೆ
ಕುಂಬಳೆ: ಯುವಕನೋರ್ವ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಪೇರಾಲ್ ಕಣ್ಣೂರು ಚೋಡಲ ಎಂಬಲ್ಲಿನ ದಿ| ಮಂಚ ಎಂಬವರ ಪುತ್ರ ಉಮೇಶ (27) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ದೈವ ಕಲಾವಿದನಾದ ಇವರು ಕಳೆದ ಫೆಬ್ರವರಿ 16ರಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿಯೂ ಪತ್ತೆಯಾಗದ ಹಿನ್ನೆಲೆ ಯಲ್ಲಿ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಮೇಶ್‌ರ ಕುರಿತು ಮಾಹಿತಿ ಲಭಿಸಿದಲ್ಲಿ ಕುಂಬಳೆ ಪೊಲೀಸ್ ಠಾಣೆ (ಫೋನ್: 04998-213037) ತಿಳಿಸಬೇ ಕಾಗಿ ಪೊಲೀಸರು ವಿನಂತಿಸಿದ್ದಾರೆ.